ಕರ್ನಾಟಕ

karnataka

ETV Bharat / business

ಕೈಗೆಟುಕುವ ದರದಲ್ಲಿ ಜೆನರಿಕ್​ ಕೋವಿಡ್​ ಔಷಧಿ ರಿಲೀಸ್ ಮಾಡಿದ ಹೆಟೆರೊ: ಬೆಲೆ ಎಷ್ಟು ಗೊತ್ತೆ? - ಕೋವಿಡ್​ ಡ್ರಗ್​

ಹೆಟೆರೊನ ಫವಿಪಿರಾವಿರ್ ಹೆಸರಿನ ಪ್ರತಿ ಮಾತ್ರೆಯ ಬೆಲೆ 59 ರೂ. ನಿಗದಿಪಡಿಸಿದ್ದು, ಹೆಟೆರೊ ಹೆಲ್ತ್‌ಕೇರ್ ಲಿಮಿಟೆಡ್ ಇದನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನವು ಜುಲೈ 29ರಿಂದ ದೇಶಾದ್ಯಂತ ಎಲ್ಲಾ ಚಿಲ್ಲರೆ ವೈದ್ಯಕೀಯ ಮಳಿಗೆಗಳು ಮತ್ತು ಆಸ್ಪತ್ರೆ ಔಷಧಾಲಯಗಳಲ್ಲಿ ಲಭ್ಯವಿದೆ.

Favipiravir
ಫವಿಪಿರಾವಿರ್‌

By

Published : Jul 29, 2020, 3:58 PM IST

ಹೈದರಾಬಾದ್: ಹೆಟೆರೊ ಸಮೂಹದ ಭಾಗವಾದ ಹೆಟೆರೊ ಲ್ಯಾಬ್ಸ್ 'ಫವಿವಿರ್' ಬ್ರ್ಯಾಂಡ್ ಹೆಸರಿನಲ್ಲಿ ಜೆನೆರಿಕ್ ಫವಿಪಿರಾವಿರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಬುಧವಾರ ಪ್ರಕಟಿಸಿದೆ.

ಹೆಟೆರೊ ಕಂಪನಿಯ ಫವಿಪಿರಾವಿರ್‌ಗೆ ಉತ್ಪಾದನೆ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆಯಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್​-19 ಚಿಕಿತ್ಸೆಯಲ್ಲಿ ಬಳಸಿದ ಕೋವಿಫೋರ್ (ರೆಮ್ಡೆಸಿವಿರ್) ನಂತರ ಹೆಟೆರೊ ಅಭಿವೃದ್ಧಿಪಡಿಸಿದ ಎರಡನೇ ಔಷಧಿ ಫವಿಪಿರಾವಿರ್ ಆಗಿದೆ. ಇದು ಓರಲ್​ ಆ್ಯಂಟಿವೈರಲ್ ಔಷಧಿಯಾಗಿದ್ದು, ಸಕಾರಾತ್ಮಕ ಕ್ಲಿನಿಕಲ್ ಫಲಿತಾಂಶಗಳನ್ನು ಈಗಾಗಲೇ ನೀಡಿದೆ ಎಂದು ಹೇಳಿದೆ.

ಫವಿಪಿರಾವಿರ್ ಗಮನಾರ್ಹ ಪ್ರಮಾಣದ ಕೋವಿಡ್​-19 ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಇದನ್ನು ಸಾಮಾನ್ಯವಾಗಿ ಸೌಮ್ಯದಿಂದ ಮಧ್ಯಮ ರೋಗಲಕ್ಷಣಗಳನ್ನು (ಮೈಲ್ಡ್​ ಟು ಮಾಡಿರೇಟ್​) ಹೊಂದಿದವರಿಗೆ ನೀಡಬಹುದಾಗಿದೆ.

ಹೆಟೆರೊನ ಫವಿವಿರ್ ಹೆಸರಿನ ಪ್ರತಿ ಮಾತ್ರೆಯ ಬೆಲೆ 59 ರೂ. ನಿಗದಿಪಡಿಸಿದ್ದು, ಹೆಟೆರೊ ಹೆಲ್ತ್‌ಕೇರ್ ಲಿಮಿಟೆಡ್ ಮಾರಾಟ ಮಾಡುತ್ತಿದೆ. ಈ ಉತ್ಪನ್ನವು ಜುಲೈ 29ರಿಂದ ದೇಶಾದ್ಯಂತದ ಎಲ್ಲಾ ಚಿಲ್ಲರೆ ವೈದ್ಯಕೀಯ ಮಳಿಗೆಗಳು ಮತ್ತು ಆಸ್ಪತ್ರೆ ಔಷಧಾಲಯಗಳಲ್ಲಿ ಲಭ್ಯವಿದೆ. ಪ್ರಿಸ್ಕ್ರಿಪ್ಷನ್‌ನಲ್ಲಿ ಮಾತ್ರ ಮಾರಾಟವಾಗಲಿದೆ ಎಂದು ತಿಳಿಸಿದೆ.

ABOUT THE AUTHOR

...view details