ಕರ್ನಾಟಕ

karnataka

ETV Bharat / business

ಸ್ಕೂಟರ್​ ಖರೀದಿಗೆ ಸಕಾಲ.. ಹೀರೋ ಇ - ಸ್ಕೂಟರ್​​ಗೆ ₹ 10,000 ತನಕ ಆಫರ್, ಫ್ರೀ ಬಡ್ಡಿ!! - ಹೀರೋ ಎಲೆಕ್ಟ್ರಿಕ್​ ಸ್ಕೂಟರ್ ಹಬ್ಬದ ಆಫರ್

ಈ ಸೀಮಿತ ಅವಧಿಯ ಹಬ್ಬದ ಕೊಡುಗೆಯ ಭಾಗವಾಗಿ ಗ್ರಾಹಕರು ಲೀಡ್ - ಆಸಿಡ್ ಮಾದರಿಗಳ ಖರೀದಿಗೆ 3,000 ರೂ. ಮತ್ತು ಆಯ್ದ ಮಾದರಿಗಳಿಗೆ 5,000 ರೂ. ಇರಲಿದೆ. ಹೀರೋ ಎಲೆಕ್ಟ್ರಿಕ್‌ನ ರೆಫರಲ್ ಸ್ಕೀಮ್‌ನಡಿ ಖರೀದಿಸುವ ಗ್ರಾಹಕರು ಹೆಚ್ಚುವರಿ 1,000 ರೂ. ಮೌಲ್ಯದ ಪ್ರಯೋಜನ ಸೇರಿ ಒಟ್ಟು 6,000 ರೂ. ಪಡೆಯಲಿದ್ದಾರೆ..

Hero Electric offers
ಹೀರೋ ಇ-ಸ್ಕೂಟರ್

By

Published : Nov 2, 2020, 4:37 PM IST

ಮುಂಬೈ :ಸೀಮಿತ ಶ್ರೇಣಿಯ ಹಬ್ಬದ ಅವಧಿಯಲ್ಲಿ ಹೀರೋ ಎಲೆಕ್ಟ್ರಿಕ್ ತನ್ನ ಇ-ಸ್ಕೂಟರ್‌ಗಳ ಮೇಲಿನ ಖರೀದಿಗೆ 5,000 ರೂ.ಗಳವರೆಗೆ ನಗದು ರಿಯಾಯಿತಿ ಸೇರಿದಂತೆ ನಾನಾ ಪ್ರಯೋಜನಗಳನ್ನು ಹೊರ ತಂದಿದೆ.

ಗ್ರಾಹಕರು ಯಾವುದೇ ದ್ವಿಚಕ್ರ ವಾಹನ ವಿನಿಮಯದ ಮೇಲೆ 5,000 ರೂ.ಗಳ ಹೆಚ್ಚುವರಿ ರಿಯಾಯಿತಿ ಆಯ್ಕೆ ಮಾಡಬಹುದು ಅಥವಾ ಆಯ್ದ ಸ್ಥಳಗಳಲ್ಲಿ ಬಡ್ಡಿರಹಿತ ಹಣಕಾಸು ಸಹ ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಲಿಥಿಯಂ - ಐಯಾನ್ ಮತ್ತು ಲೀಡ್-ಆ್ಯಸಿಡ್ ಶ್ರೇಣಿಯ ಇ-ಸ್ಕೂಟರ್‌ಗಳೆರಡಕ್ಕೂ ಅನ್ವಯವಾಗಲಿದೆ. ಈ ಹಬ್ಬದ ವೇಳೆ, ದೇಶದ ಯಾವುದೇ ಕಂಪನಿಯ 500ಕ್ಕೂ ಹೆಚ್ಚು ಮಾರಾಟಗಾರರ ಮೂಲಕ ನವೆಂಬರ್ 14ರವರೆಗೆ ರಿಯಾಯಿತಿ ಪಡೆಯಬಹುದು ಎಂದು ಹೀರೋ ಎಲೆಕ್ಟ್ರಿಕ್ ತಿಳಿಸಿದೆ.

ಈ ಸೀಮಿತ ಅವಧಿಯ ಹಬ್ಬದ ಕೊಡುಗೆಯ ಭಾಗವಾಗಿ ಗ್ರಾಹಕರು ಲೀಡ್ - ಆ್ಯಸಿಡ್ ಮಾದರಿಗಳ ಖರೀದಿಗೆ 3,000 ರೂ. ಮತ್ತು ಆಯ್ದ ಮಾದರಿಗಳಿಗೆ 5,000 ರೂ. ಇರಲಿದೆ. ಹೀರೋ ಎಲೆಕ್ಟ್ರಿಕ್‌ನ ರೆಫರಲ್ ಸ್ಕೀಮ್‌ನಡಿ ಖರೀದಿಸುವ ಗ್ರಾಹಕರು ಹೆಚ್ಚುವರಿ 1,000 ರೂ. ಮೌಲ್ಯದ ಪ್ರಯೋಜನ ಸೇರಿ ಒಟ್ಟು 6,000 ರೂ. ಪಡೆಯಲಿದ್ದಾರೆ.

ಹೊಸದಾಗಿ ಬಿಡುಗಡೆಯಾದ ಆಪ್ಟಿಮಾ ಎಚ್‌ಎಕ್ಸ್ ಸಿಟಿ ಸ್ಪೀಡ್ ಮತ್ತು ನೈಕ್ಸ್ ಎಚ್‌ಎಕ್ಸ್ ಸಿಟಿ ಸ್ಪೀಡ್ ಅನ್ನು ಕ್ರಮವಾಗಿ 57,560 ರೂ. ಮತ್ತು 63,990 ರೂ. ಸೀಮಿತ ಸಮಯದ ಬೆಲೆ ನೀಡಲಾಗಿದೆ. ಇದನ್ನು ಆಫರ್‌ನಿಂದ ಹೊರಗಿಡಲಾಗಿದೆ ಎಂದು ತಿಳಿಸಿದೆ.

ABOUT THE AUTHOR

...view details