ಕರ್ನಾಟಕ

karnataka

ETV Bharat / business

ಚೀನಾದೊಂದಿಗಿನ 900 ಕೋಟಿ ರೂ. ಒಪ್ಪಂದ ರದ್ದು ಮಾಡಿದ 'ಹೀರೋ'​!

ವ್ಯಾಪಾರದ ಮೂಲಕ ಚೀನಾಗೆ ಸೆಡ್ಡು ಹೊಡೆದಿರುವ ಕೇಂದ್ರ ಸರ್ಕಾರ ಈಗಾಗಲೇ ಅನೇಕ ಒಪ್ಪಂದ ಮುರಿದುಕೊಂಡಿದ್ದು, ಇದೀಗ ದೇಶದ ಪ್ರಮುಖ ಕಂಪನಿ ಕೂಡ ಅದರೊಂದಿಗಿನ ಒಪ್ಪಂದ ರದ್ದು ಮಾಡಿಕೊಂಡಿದೆ.

Hero Cycles
Hero Cycles

By

Published : Jul 4, 2020, 8:32 PM IST

ನವದೆಹಲಿ: ಗಾಲ್ವಾನ್​​ ಕಣಿವೆಯಲ್ಲಿ ಭಾರತ-ಚೀನಾ ನಡುವಿನ ಹಿಂಸಾತ್ಮಕ ಕೃತ್ಯದ ನಂತರ ಚೀನಾ ಜತೆಗಿನ ಒಪ್ಪಂದ ರದ್ದುಗೊಳ್ಳುತ್ತಿದ್ದು, ಈಗಾಗಲೇ ರೈಲ್ವೆ ಇಲಾಖೆ, ರಸ್ತೆ ಸಾರಿಗೆ ಒಪ್ಪಂದ ರದ್ದಾಗಿವೆ. ಇದರ ಮಧ್ಯೆ ಹೀರೋ ಸೈಕಲ್​ ಕಂಪನಿ ಕೂಡ ಒಪ್ಪಂದ ಮುರಿದುಕೊಂಡಿದೆ.

ಸೈಕಲ್, ಬೈಕ್​​ ತಯಾರಿಕಾ ಕಂಪನಿಯಾಗಿರುವ ಹೀರೋ ಸೈಕಲ್​ ಬಿಡಿ ಭಾಗಗಳು ಚೀನಾದಿಂದ ಆಮದಾಗುತ್ತಿದ್ದವು. ಆದರೆ ಇದೀಗ ಪಂಜಾಬ್​​ನಿಂದ ಈ ಬಿಡಿ ಭಾಗ ತರಿಸಿಕೊಳ್ಳಲು ನಿರ್ಧರಿಸಿರುವುದಾಗಿ ಕಂಪನಿ ಚೇರ್ಮನ್​​​ ಪಂಕಜ್​​ ಮುಂಜಾಲ್​ ತಿಳಿಸಿದ್ದಾರೆ. ಈಗಾಗಲೇ ಅಲ್ಲಿನ ಸಚಿವರೊಂದಿಗೆ ಮಾತುಕತೆ ಸಹ ನಡೆಸಿದ್ದಾಗಿ ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ಚೀನಾದಿಂದ ಒಟ್ಟು 900 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಇದೀಗ ನಾವು ಆ ಒಪ್ಪಂದ ರದ್ದು​ ಮಾಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ಎಲ್ಲಾ ರೀತಿಯ ಸೈಕಲ್​ಗಳ ಬಿಡಿ ಭಾಗ ಚೀನಾದಿಂದ ಆಮದಾಗುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.

ಜತೆಗೆ ಜಪಾನ್​ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಅಲ್ಲೂ ಸ್ಥಾವರ ಸ್ಥಾಪಿಸಲು ತಾವು ನಿರ್ಧರಿಸುವುದಾಗಿ ಕಂಪನಿ ಹೇಳಿದೆ. ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರದ ಪಿಎಂ ಕೇರ್ಸ್​ ನಿಧಿಗೆ ಹೀರೋ ಕಂಪನಿ 100 ಕೋಟಿ ರೂ. ದೇಣಿಗೆ ನೀಡಿದೆ.

ABOUT THE AUTHOR

...view details