ನವದೆಹಲಿ:ದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಮಾನ್ಯ ಕಾರ್ಯಾಚರಣೆ ವಿಧಾನಗಳನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ.
ತಮ್ಮ ದೈನಂದಿನ ಅಗತ್ಯತೆಗಳು, ಶಾಪಿಂಗ್, ಮನರಂಜನೆ ಮತ್ತು ಆಹಾರಕ್ಕಾಗಿ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ ಎಂಬ ಅಂಶವನ್ನು ಪರಿಗಣಿಸಿ ಆರೋಗ್ಯ ಸಚಿವಾಲಯವು ಕೋವಿಡ್-19 ಹರಡುವಿಕೆ ನಿಯಂತ್ರಿಸುವ ಶಿಷ್ಟಾಚಾರಗಳನ್ನು ರೂಪಿಸಿದೆ. ಸಾಂಕ್ರಾಮಿಕದ ಮಧ್ಯೆ, ಆರ್ಥಿಕ ಚಟುವಟಿಕೆಗಳನ್ನು ತೆರೆದಿರುವುದರಿಂದ, ಜನರು ಮಾರುಕಟ್ಟೆಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಇಂತಹ ಜನಸಂದಣಿಗಳಲ್ಲಿ ಕೋವಿಡ್-19ನ್ನು ನಿಯಂತ್ರಿಸುವ ಕ್ರಮಗಳನ್ನು ಪಾಲಿಸದಿದ್ದರೆ ಕೊರೊನಾ ವೈರಸ್ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಮಾರುಕಟ್ಟೆಗಳಲ್ಲಿ ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳ ಜೊತೆಗೆ ವಿವಿಧ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಇದು ವಿವರಿಸುತ್ತದೆ. ಈ ಮಾರ್ಗಸೂಚಿಗಳು ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳಿಗೆ ಅನ್ವಯವಾಗುತ್ತವೆ.
ಡಿ.11ರಿಂದ ಫಿಕ್ಕಿ ಸಮಾವೇಶ: 'ಇನ್ಸ್ಪಾಯರ್ಡ್ ಇಂಡಿಯಾ' ಬಗ್ಗೆ ಪ್ರಧಾನಿ ಮೋದಿ, ಸತ್ಯ ನಾಡೆಲ್ ಭಾಷಣ
ಮಾಲ್‌ಗಳು/ ಹೈಪರ್/ ಸೂಪರ್‌ಮಾರ್ಕೆಟ್‌ಗಳನ್ನು ಹೊಂದಿರುವ ದೊಡ್ಡ ಮಾರುಕಟ್ಟೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಹಿಂದೆ ಹೊರಡಿಸಿದ ಮಾರ್ಗಸೂಚಿಗಳು ಅನ್ವಯಿಸುತ್ತವೆ.
ಮಾರುಕಟ್ಟೆಗಳಲ್ಲಿರುವ ರೆಸ್ಟೋರೆಂಟ್‌ಗಳಿಗೆ, ಸಚಿವಾಲಯ ಹೊರಡಿಸಿದ ಹಿಂದಿನ ಮಾರ್ಗಸೂಚಿಗಳು ಅನ್ವಯವಾಗುತ್ತವೆ.
ಮಾರುಕಟ್ಟೆಗಳ ಭಾಗವಾಗಿರುವ ಅಥವಾ ಮಾರುಕಟ್ಟೆ ಸಂಕೀರ್ಣದಲ್ಲಿ ಇರುವ ಕಚೇರಿಗಳು, ಧಾರ್ಮಿಕ ಸ್ಥಳಗಳು / ಪೂಜಾ ಸ್ಥಳಗಳು, ತರಬೇತಿ ಸಂಸ್ಥೆಗಳು, ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳು, ಸಿನೆಮಾ ಮಂದಿರಗಳು / ಚಿತ್ರಮಂದಿರಗಳು ಸೇರಿದಂತೆ ಯಾವುದೇ ನಿರ್ದಿಷ್ಟ ಚಟುವಟಿಕೆಗಳಿಗೆ, ಸಚಿವಾಲಯವು ಕಾಲಕಾಲಕ್ಕೆ ಹೊರಡಿಸಿರುವ ನಿರ್ದಿಷ್ಟ ಮಾರ್ಗಸೂಚಿಗಳು ಅನ್ವಯಿಸುತ್ತವೆ.
ಕಂಟೇನ್ಮೆಂಟ್ ವಲಯಗಳಲ್ಲಿನ ಮಾರುಕಟ್ಟೆಗಳನ್ನು ತೆರೆಯುವಂತಿಲ್ಲ. ಕಂಟೇನ್ಮೆಂಟ್ ವಲಯಗಳ ಹೊರಗಿನ ಮಾರುಕಟ್ಟೆಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
ಹೆಚ್ಚು ಅಪಾಯವಿರುವವರನ್ನು ರಕ್ಷಿಸುವುದು
ಅಗತ್ಯ ಮತ್ತು ಆರೋಗ್ಯದ ಉದ್ದೇಶಗಳನ್ನು ಹೊರತುಪಡಿಸಿ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಮಾರ್ಕೆಟ್ ಮಾಲೀಕರ ಸಂಘಗಳಿಗೆ ಈ ಬಗ್ಗೆ ಸೂಕ್ತ ಸಲಹೆ ನೀಡಬೇಕು.
ಹೆಚ್ಚು ಅಪಾಯವಿರುವ ನೌಕರರು, ಅಂದರೆ ವಯಸ್ಸಾದ ಉದ್ಯೋಗಿಗಳು, ಗರ್ಭಿಣಿ ನೌಕರರು ಮತ್ತು ಆಧಾರವಾಗಿರುವ ವೈದ್ಯಕೀಯ ಆರೈಕೆಯಲ್ಲಿರುವ ಹೊಂದಿರುವ ನೌಕರರು ಹೆಚ್ಚು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಅಂತಹ ವ್ಯಕ್ತಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕದ ಅಗತ್ಯವಿರುವ ಯಾವುದೇ ಕೆಲಸಗಳಿಗೆ ನಿಯೋಜಿಸಬಾರದು ಎಂದು ಮಾರುಕಟ್ಟೆ ಸಂಘಗಳಿಗೆ ಸೂಚಿಸಲಾಗಿದೆ.
ಕೋವಿಡ್ ನಿಯಂತ್ರಣ ನಡವಳಿಕೆಯನ್ನು ಉತ್ತೇಜಿಸುವುದು
ಕೋವಿಡ್-19 ಸಾಂಕ್ರಾಮಿಕದ ಅಪಾಯವನ್ನು ಕಡಿಮೆ ಮಾಡಲು ಸರಳವಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ಈ ಕ್ರಮಗಳನ್ನು ಎಲ್ಲ ಸಮಯದಲ್ಲೂ ಅಂಗಡಿಗಳ ಮಾಲೀಕರು, ಅಲ್ಲಿಗೆ ಭೇಟಿ ನೀಡುವವರು ಮತ್ತು ಕಾರ್ಮಿಕರು ಗಮನಿಸಬೇಕಾಗುತ್ತದೆ.
ಕನಿಷ್ಠ 6 ಅಡಿಗಳ ದೈಹಿಕ ಅಂತರವನ್ನುಸಾಧ್ಯವಾದಷ್ಟು ಅನುಸರಿಸಬೇಕು.
ಮುಖಗವಸುಗಳ ಬಳಕೆ ಕಡ್ಡಾಯಗೊಳಿಸಬೇಕು. ಕೈಗಳು ಕಾಣುವಂತೆ ಕೊಳಕಾಗಿಲ್ಲದಿದ್ದರೂ ಸಹ (ಕನಿಷ್ಠ 40-60 ಸೆಕೆಂಡುಗಳವರೆಗೆ) ಸಾಬೂನಿನಿಂದ ಕೈ ತೊಳೆಯುವುದು ಅಭ್ಯಾಸ ಮಾಡಿಕೊಳ್ಳಬೇಕು. ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ಬಳಕೆಯನ್ನು (ಕನಿಷ್ಠ 20 ಸೆಕೆಂಡುಗಳ ಕಾಲ) ಅಂಗಡಿಗಳು ಮತ್ತು ಇತರ ಸ್ಥಳಗಳ ಹೊರಗೆ ಮಾಡಬೇಕು.
ಉಸಿರಾಟದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಮ್ಮುವಾಗ / ಸೀನುವಾಗ, ಟಿಶ್ಯೂ /ಕರವಸ್ತ್ರ/ಬಾಗಿದ ಮೊಣಕೈಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಮತ್ತು ಬಳಸಿದ ಟಿಶ್ಯೂಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು. ಆರೋಗ್ಯದ ಸ್ವಯಂ-ಮೇಲ್ವಿಚಾರಣೆ ಮತ್ತು ಯಾವುದೇ ರೀತಿಯ ಅನಾರೋಗ್ಯ ಕಂಡುಬಂದರೆ ರಾಜ್ಯ ಮತ್ತು ಜಿಲ್ಲಾ ಸಹಾಯವಾಣಿಗೆ ತಕ್ಷಣ ವರದಿ ಮಾಡುವುದು.
ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಆರೋಗ್ಯ ಸೇತು ಅಪ್ಲಿಕೇಶನ್‌ನ ಸ್ಥಾಪನೆ ಮತ್ತು ಬಳಕೆಯನ್ನು ಎಲ್ಲರಿಗೂ ಸಲಹೆ ಮಾಡಲಾಗಿದೆ.
ಮಾರುಕಟ್ಟೆಗಳಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದು
ಸಾಮಾನ್ಯ ಸಮಯದಲ್ಲಿ, ಮಾರುಕಟ್ಟೆಗಳು ಹೆಚ್ಚಿನ ಜನರಿಂದ ತುಂಬಿರುತ್ತವೆ, ಆಗ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳ ಕೊರತೆಯಿರುತ್ತವೆ. ಕೋವಿಡ್ ಹರಡುವ ಅಪಾಯವನ್ನು ತಡೆಗಟ್ಟಲು, ಮಾರುಕಟ್ಟೆಗಳಲ್ಲಿ ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸುವ ಮೊದಲು, ಅಂಗಡಿಯೊಳಗಿನ ಎಲ್ಲ ಪ್ರದೇಶಗಳನ್ನು ಅಂಗಡಿ ಮಾಲೀಕರು ಸ್ವಚ್ 1 ಗೊಳಿಸಬೇಕು (1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ).
ಆಗಾಗ್ಗೆ ಮುಟ್ಟುವ ಮೇಲ್ಮೈಗಳನ್ನು (ಬಾಗಿಲ ಗುಬ್ಬಿಗಳು / ಹ್ಯಾಂಡಲ್‌ಗಳು, ಎಲಿವೇಟರ್ ಗುಂಡಿಗಳು, ರೇಲಿಂಗ್ಸ್, ಕುರ್ಚಿಗಳು, ಟೇಬಲ್ ಟಾಪ್ಸ್, ಕೌಂಟರ್‌ಗಳು, ಇತ್ಯಾದಿ) ಮತ್ತು ನೆಲ, ಗೋಡೆ ಇತ್ಯಾದಿಗಳನ್ನು ಅಂಗಡಿಗಳನ್ನು ತೆರೆಯುವ ಮೊದಲು ಮತ್ತು ದಿನದ ಅಂತ್ಯದಲ್ಲಿ ಸ್ವಚ್ಛಗೊಳಿಸಬೇಕು ಮತ್ತು ನಿಯಮಿತವಾಗಿ ಸೋಂಕುರಹಿತಗೊಳಿಸಬೇಕು.
ಮುಂಬೈನ ಚಲನಚಿತ್ರ ನಗರವನ್ನು ಬೇರೆಡೆ ಸ್ಥಳಾಂತರಿಸುವುದು ಸುಲಭವಲ್ಲ ; ಸಂಜಯ್ ರೌವತ್
ಅಂಗಡಿಗಳ ಪ್ರವೇಶ ಸ್ಥಳದಲ್ಲಿ ಕಡ್ಡಾಯವಾಗಿ ಕೈ ನೈರ್ಮಲ್ಯ (ಸ್ಯಾನಿಟೈಜರ್) ವ್ಯವಸ್ಥೆ ಮಾಡಬೇಕು.
ವಾಹನ ನಿಲುಗಡೆಯ ಸಮಯದಲ್ಲಿ ವಾಹನಗಳನ್ನು ನೌಕರರು ಬಳಸಿದ್ದರೆ, ವಾಹನವನ್ನು ಮತ್ತೆ ಬಳಸುವ ಮೊದಲು ಸ್ಟೀರಿಂಗ್, ಬಾಗಿಲು ಹ್ಯಾಂಡಲ್‌ಗಳು, ಕೀಗಳು ಇತ್ಯಾದಿಗಳನ್ನು ಮಾಲೀಕರು ಸೋಂಕುರಹಿತ ಮಾಡಬೇಕು.
ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳು ಮತ್ತು ತೆರೆದ ಸ್ಥಳಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದೊಂದಿಗೆ ಸ್ವಚ್ಛಗೊಳಿಸಬೇಕು. ಇದನ್ನು ನಿಯಮಿತವಾಗಿ ಮಾಡಬೇಕು.
ಶೌಚಾಲಯಗಳು, ಕೈ ತೊಳೆಯುವುದು ಮತ್ತು ಕುಡಿಯುವ ನೀರಿನ ಕೇಂದ್ರಗಳನ್ನು ಪ್ರತಿದಿನ ಕನಿಷ್ಠ 3-4 ಬಾರಿ ಶುದ್ಧೀಕರಣ ಮಾಡಬೇಕು.
ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳು ಮತ್ತು ತೆರೆದ ಸ್ಥಳಗಳ ಆರೋಗ್ಯಕರ ವಾತಾವರಣವನ್ನು ಮಾರುಕಟ್ಟೆ ಸಂಘಗಳು ಸ್ವತಃ ಅಥವಾ ಸ್ಥಳೀಯ ನಗರ ಸಂಸ್ಥೆಗಳು / ನಾಗರಿಕ ಸಂಸ್ಥೆಗಳ ಮೂಲಕ ನಿರ್ವಹಿಸಬೇಕು.
ಮಾರುಕಟ್ಟೆಯ ನಡವಳಿಕೆಗಳು
ಮಾರುಕಟ್ಟೆಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆ ಮಾರುಕಟ್ಟೆ ಸಂಘಗಳು ಹಲವಾರು ಕ್ರಮಗಳ ಮೂಲಕ ಸ್ವಯಂ - ನಿಯಂತ್ರಿಸಬಹುದು:
ಮಾರುಕಟ್ಟೆಗಳಲ್ಲಿ (ಅಂಗಡಿಗಳ ಒಳಗೆ ಮತ್ತು ಹೊರಗೆ) ಕೋವಿಡ್ ಸೂಕ್ತ ನಡವಳಿಕೆ ಅನುಷ್ಠಾನಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರತಿ ಮಾರುಕಟ್ಟೆಗೆ ಉಪ - ಸಮಿತಿಯ ರಚನೆ.
ಸರ್ಕಾರ ಅನುಮೋದಿಸಿರುವ ದರದಲ್ಲಿ ಮುಖಗವಸು ವಿತರಣೆ ಕಿಯೋಸ್ಕ್ ಗಳನ್ನು ಪ್ರವೇಶ ಸ್ಥಳಗಳು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಸ್ಥಾಪಿಸಬಹುದು.
ಖರೀದಿಸಲು ಸಾಧ್ಯವಾಗದವರಿಗೆ ಉಚಿತ ಮುಖಗವಸುಗಳನ್ನು ವಿತರಿಸುವುದು. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳಲ್ಲಿ ಕೈ ತೊಳೆಯುವ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸೋಪ್ ಮತ್ತು ನೀರಿನ ಲಭ್ಯತೆಯನ್ನು ಖಚಿತಪಡಿಸುವುದು. ಕಾಲು ಚಾಲಿತ ಟ್ಯಾಪ್‌ಗಳು ಮತ್ತು ಸಂಪರ್ಕರಹಿತ ಸೋಪ್ ವಿತರಕಗಳ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
ಮಾರುಕಟ್ಟೆಗಯ ಪ್ರವೇಶ ಸ್ಥಳಗಳಲ್ಲಿ ಸಾಮೂಹಿಕ ಉಷ್ಣ ತಪಾಸಣೆ ನಡೆಸುವುದು .
ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳ ನೈರ್ಮಲ್ಯೀಕರಣಕ್ಕಾಗಿ ಥರ್ಮಲ್ ಗನ್, ಸ್ಯಾನಿಟೈಜರ್ಸ್, ಸೋಂಕು ನಿವಾರಕಗಳನ್ನು ಸಂಗ್ರಹಿಸುವುದು.
ಪ್ರಮುಖ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯ ಬಗ್ಗೆ ಐಇಸಿ ಸಾಮಗ್ರಿಗಳು ಪ್ರದರ್ಶಿಸುವುದು.
ಜಾರಿ ಸಂಸ್ಥೆಗಳಿಂದ ಕೋವಿಡ್ ಸೂಕ್ತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವುದು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಆತಂಕ - ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳೇನು?
ಸ್ವಯಂ-ನಿಯಂತ್ರಕ ವಿಧಾನವು ವಿಫಲವಾದಾಗ ಅಥವಾ ಅದರ ಪರಿಣಾಕಾರಿಯಾಗಿಲ್ಲದಿದ್ದರೆ, ಯೋಜನೆಯು ಜಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅದರಲ್ಲಿ ಇವುಗಳು ಒಳಗೊಂಡಿರಬಹುದು:
ಮುಖಗವಸು/ ಮುಖದ ಹೊದಿಕೆಯನ್ನು ಧರಿಸದೇ ಅಥವಾ ದೈಹಿಕ ಅಂತರದ ಮಾನದಂಡಗಳನ್ನು ಅನುಸರಿಸದವರಿಗೆ ದಂಡ ವಿಧಿಸುವುದು.
ಮಾರುಕಟ್ಟೆಗಳು / ಅಂಗಡಿಗಳನ್ನು ಪರ್ಯಾಯ ದಿನಗಳಲ್ಲಿ ತೆರೆಯಲು ಅನುಮತಿ ನೀಡುವ ಆಯ್ಕೆಯ ಬಗ್ಗೆ ಚಿಂತಿಸುವುದು
ಮಾರುಕಟ್ಟೆಯಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದರೆ ಮಾರುಕಟ್ಟೆಗಳನ್ನು ಮುಚ್ಚುವ ಬಗ್ಗೆ ಆಡಳಿತ ನಿರ್ಧರಿಸಬಹುದು.
ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮಾಲೀಕರಿಂದ ಕೋವಿಡ್ ಸೂಕ್ತ ನಡವಳಿಕೆಗಳನ್ನು ಖಚಿತಪಡಿಸಿಕೊಳ್ಳಲು ಯೋಜನೆ