ಹೈದರಾಬಾದ್:ಕ್ರೆಡಿಟ್ ಕಾರ್ಡ್ ಇದ್ದರೆ ಅದು ಕೈಯಲ್ಲಿ ಹಣ ಇದ್ದಂತೆ. ಅಷ್ಟೇ ಏಕೆ ಕ್ರೆಡಿಟ್ ಕಾರ್ಡ್‌ಗಳನ್ನು ನೀವು ಹೊಂದಿದ್ದೇ ಆದರೆ ಹಲವು ಆಯ್ಕೆಗಳಿವೆ. ಉದಾಹರಣೆಗೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ನಿಂದ ಹಣ ಉಪಯೋಗಿಸಿದ ಬಳಿಕ, ಅದನ್ನು ಮರುಪಾವತಿ ಮಾಡಲು ನಿಮಗೆ ಸಮಯಾವಕಾಶ ಸಿಗುತ್ತದೆ.
ಇನ್ನು ನಿಮಗೆ ಆ ಸಮಯಕ್ಕೂ ಹಣ ಪಾವತಿಸಲು ಸಾಧ್ಯವಾಗಿಲ್ಲ ಎಂದರೆ ಅದನ್ನು ಮರುಪಾವತಿಸಲು EMI ಸೌಲಭ್ಯ ಸಿಗುತ್ತದೆ. ಇನ್ನು ನೀವು ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ಗಳಿಂದ ಉತ್ತಮ ನಿರ್ಹವಣೆ ಮಾಡಿದ್ದೇ ಆದಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದುವ ಅವಕಾಶವನ್ನೂ ಪಡೆಯುತ್ತೀರಿ. ಈ ಮೂಲಕ ವಿಶೇಷ ಕೊಡುಗೆಗಳು ಮತ್ತು ಕ್ರೆಡಿಟ್ ಕಾರ್ಡ್ ವೆಚ್ಚಗಳ ಮೇಲೆ ಕೆಲವು ರಿಯಾಯಿತಿಗಳನ್ನು ಸಹ ಪಡೆಯಬಹುದಾಗಿದೆ.
ಏನೆಲ್ಲ ಪ್ರಯೋಜನಗಳಿವೆ:ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಸಹ - ಬ್ರಾಂಡೆಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತು ಇವುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತಿವೆ. ಕೆಲವರು ಇಂತಹ ಕಾರ್ಡ್‌ಗಳ ಸೌಲಭ್ಯ ಪಡೆಯುವ ಮೂಲಕ ಲಾಭವನ್ನೂ ಮಾಡಿಕೊಳ್ಳುತ್ತಿದ್ದಾರೆ. ಬ್ರಾಂಡೆಡ್ ಟ್ರಾವೆಲ್ ಕಾರ್ಡ್‌ಗಳು ಏರ್‌ಲೈನ್ ಟಿಕೆಟ್‌ಗಳ ಮೇಲೆ ಶೇ 5ರ ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತವೆ. ಇದು ಪ್ರತಿ ಬಾರಿಯೂ ಲಭ್ಯವಾಗುತ್ತಿರುತ್ತದೆ. ಇದಷ್ಟೇ ಅಲ್ಲ ಇತರ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಂದರ್ಭಿಕ ರಿಯಾಯಿತಿ ಮತ್ತು ಕೊಡುಗೆಗಳನ್ನು ಪಡೆಯಬಹುದು.
ಆಗಾಗ ಈಮೇಲ್ ಚೆಕ್ ಮಾಡುತ್ತಿರಿ:ನೀವು ಈ ಮೇಲ್ ಹೊಂದಿದ್ದರೆ ಅಥವಾ ಮೊಬೈಲ್ ಸಂಖ್ಯೆ ಹೊಂದಿದ್ದರೆ, ಅವುಗಳ ಮೂಲಕ ಕ್ರೆಡಿಟ್ ಕಾರ್ಡ್ ಪಡೆಯುವ ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ಸಂದೇಶಗಳು ಬರುತ್ತವೆ. ಅಷ್ಟೇ ಅಲ್ಲ ಅವುಗಳು ನೀಡುವ ಕೊಡುಗೆಗಳ ಬಗ್ಗೆ ಈ - ಮೇಲ್ ಮೂಲಕ ಆಗಾಗ ಬ್ಯಾಂಕ್ಗಳು ಮಾಹಿತಿ ನೀಡುತ್ತಿರುತ್ತವೆ. ಅದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನಿಗದಿತ ಈ ಮೇಲ್ ಹೊಂದುವುದು ಉತ್ತಮ.
ನೀವು ಪಡೆದುಕೊಂಡಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯೊಂದಿಗೆ ನಿಮ್ಮ ಮೇಲ್ ಐಡಿ, ಫೋನ್ ಸಂಖ್ಯೆಗಳನ್ನು ಸಮಯಕ್ಕನುಸಾರವಾಗಿ ನವೀಕರಿಸಬೇಕು. ಕೆಲವೊಮ್ಮೆ ಮೇಲ್ ಬರುತ್ತದೆ, ಆದರೆ ಸ್ಪ್ಯಾಮ್ ಫೋಲ್ಡರ್‌ಗೆ ಹೋಗಿರುತ್ತದೆ. ಇದನ್ನು ನಿರ್ಲಕ್ಷಿಸಿದರೆ ಆಫರ್‌ಗಳ ವಿಷಯ ತಿಳಿಯದೇ ಇರಬಹುದು. ಆದ್ದರಿಂದ, ಕ್ರೆಡಿಟ್ ಕಾರ್ಡ್‌ಗಳ ನವೀಕರಣಗಳನ್ನು ಪಡೆಯಲು ಕೊಡುಗೆಗಳ ಮೇಲೆ ಸದಾ ಕಣ್ಣಿಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಬ್ಯಾಂಕ್ಗಳು ಆಗಾಗ ತಮ್ಮ ವೆಬ್‌ಸೈಟ್‌ನಲ್ಲಿ ಕಾರ್ಡ್‌ನ ಪ್ರಯೋಜನಗಳನ್ನು ಪ್ರಚುರ ಪಡಿಸುತ್ತವೆ. ಈ ವಿವರಗಳನ್ನು ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಕಾಣಬಹುದು. ನೀವು ಕಾಲಕಾಲಕ್ಕೆ ಈ ಮಾಹಿತಿಯನ್ನು ಗಮನಿಸುತ್ತಿರಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಿ ಬೇರೆ ರೀತಿಯ ಕಾರ್ಡ್ ತೆಗೆದುಕೊಳ್ಳಲು ಬಯಸಿದರೆ, ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಿರುತ್ತದೆ. ಆ ಮಾಹಿತಿ ಅನುಸಾರವೇ ನೀವು ಮುಂದುವರೆಯಬೇಕಾಗುತ್ತದೆ.
ಇದನ್ನು ಓದಿ:4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್, ಡೀಸೆಲ್ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್ ಬೆಲೆ 50 ರೂ.ಏರಿಕೆ
ನಾನಾ ರಿಯಾಯಿತಿಗಳು:ವ್ಯಾಪಾರಿಗಳಿಂದ ಹಿಡಿದು ಇ-ಕಾಮರ್ಸ್ ವೆಬ್‌ಸೈಟ್‌ಗಳವರೆಗೆ ಹಾಗೂ ದೊಡ್ಡ ಬ್ರ್ಯಾಂಡ್ ಶೋರೂಮ್‌ಗಳವರೆಗೆ ಖರೀದಿಗಳ ಮೇಲೆ ಕ್ರೆಡಿಟ್ ಕಾರ್ಡ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಇಷ್ಟಪಡುವ ವಸ್ತು ಖರೀದಿಸುವಾಗ ನೀವು ಖರೀದಿಸಲು ಯೋಜಿಸುತ್ತಿರುವ ಉತ್ಪನ್ನಗಳ ಮೇಲೆ ಯಾವ ಕಂಪನಿಯು ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತದೆ ಎಂಬುದನ್ನು ಗ್ರಾಹಕರು ಅರಿವುದು ಮುಖ್ಯವಾಗಿದೆ. ಯಾಕೆಂದರೆ, ಕೆಲವು ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ನಿಗದಿ ಮಾಡಲಾಗಿರುತ್ತದೆ. ಈ ಬಗ್ಗೆ ತಿಳಿದುಕೊಂಡು ಆಫರ್‌ಗಳ ಲಾಭ ಪಡೆದುಕೊಳ್ಳುವುದು ಉತ್ತಮ
ಮಾಹಿತಿ ಇಲ್ಲದಿದ್ದರೆ ಹೀಗೆ ಮಾಡಿ:ಸೇವಾ ಕೇಂದ್ರದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ಸರಿಯಾದ ಮಾಹಿತಿ ನಿಮಗೆ ಇಲ್ಲ ಎಂದೇ ಬಾವಿಸೋಣ. ಅಂತಹ ಸಂದರ್ಭದಲ್ಲಿ, ಪೂರ್ಣ ವಿವರಗಳಿಗಾಗಿ ನೀವು ಕಾರ್ಡ್ ಕಂಪನಿಯ ಗ್ರಾಹಕ ಬೆಂಬಲ ಕೇಂದ್ರಕ್ಕೆ ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳುವ ಅವಕಾಶಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಉದಾಹರಣೆಗೆ, ನೀವು ವೆಬ್‌ಸೈಟ್‌ನಿಂದ ವಿಮಾನ ಟಿಕೆಟ್ ಬುಕ್ ಮಾಡಲು ಬಯಸಿದಾಗ, ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ಬುಕ್ ಮಾಡಿದರೆ ಎಷ್ಟು ರಿಯಾಯಿತಿ ಸಿಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ಆಗ ನೀವು ಕಸ್ಟಮರ್ ಕೇರ್ ಸಂಪರ್ಕಿಸಿ ನಿಮಗೆ ಸಿಗುವ ರಿಯಾಯಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
ವಿಶೇಷ ಕೊಡುಗೆಗಳ ಮಾಹಿತಿ ನೀಡಲು ವೆಬ್ಸೈಟ್ಗಳ ನೆರವು ಪಡೆಯಿರಿ:ಕ್ರೆಡಿಟ್ ಕಾರ್ಡ್‌ಗಳಲ್ಲಿ ವಿಶೇಷ ಕೊಡುಗೆಗಳು ಯಾವುವು ಎಂಬುದನ್ನು ಕಂಡುಹಿಡಿಯಲು ಕೆಲವು ಆನ್‌ಲೈನ್ ವೆಬ್‌ಸೈಟ್‌ಗಳೇ ಇವೆ. ಇವುಗಳ ಮೂಲಕ ನೀವು ರಿಯಾಯಿತಿಗಳು, ಕ್ಯಾಸ್ಬ್ಯಾಕ್ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ನಿಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸುವ ಮೊದಲು, ನೀವು ಅವುಗಳ ನಿಜವಾದ ಬೆಲೆಯನ್ನು ತಿಳಿದುಕೊಳ್ಳಬೇಕು. ಆಗ ಅದರಲ್ಲಿ ನಿಜವಾಗಿಯೂ ರಿಯಾಯಿತಿ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
ಯಾವುದೇ ಕಾರಣಕ್ಕೂ ಒಟಿಪಿ ಹಂಚಿಕೊಳ್ಳಬೇಡಿ:ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಯಾವ ಕಾರ್ಡ್ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ತುಲನೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಯಾವುದು ಉತ್ತಮ ಎಂದು ಎರಡೆರಡು ಬಾರಿ ಪರಿಶೀಲಿಸಿ, ಉತ್ತಮ ಎನಿಸುವ ಕಾರ್ಡ್ ಆಫರ್ ಮೂಲಕ ಮುಂದುವರೆಯಿರಿ. ಆದರೆ, ಯಾವುದೇ ಸಂದರ್ಭದಲ್ಲಿ ನೀವು ಕಾರ್ಡ್ ವಿವರಗಳು ಮತ್ತು OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದನ್ನು ಯಾವತ್ತೂ ಮರೆಯಬಾರದು.