ನವದೆಹಲಿ:ದೇಶದ ಜಿಡಿಪಿಯೂ ಶೇ.8 ರಿಂದ ಶೇ. 5ಕ್ಕೆ ಇಳಿದಿದೆ. ಇಂತಹ ಕ್ಷಿಪ್ರ ಮಂದಗತಿಗೆ ಅನೇಕ ಕಾರಣಗಳನ್ನು ನಾವು ಕಾಣಬಹುದಾಗಿದೆ.
ಮೊದಲನೇಯದಾಗಿ ಹೂಡಿಕೆಯೂ 2011-12ರಲ್ಲಿ ಶೇ. 34 ರಷ್ಟು ಇದ್ದಿದ್ದು, 2017-18ರಲ್ಲಿ ಶೇ. 24ಕ್ಕೆ ಇಳಿದಿದೆ. ಉತ್ಪಾದನಾ ವಲಯದಲ್ಲಿ ತಂದ ಕೆಲವು ಸುಧಾರಣೆಗಳು, ಐಎಲ್ ಮತ್ತು ಎಫ್ಎಸ್ ನಂತಹ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ ಉಂಟಾದ ಕೆಲವು ಸಮಸ್ಯೆಗಳಿಂದಾಗಿ ಜಿಡಿಪಿಯೂ ಶೇ. 5 ರಷ್ಟು ಇಳಿದಿದ್ದು, ಗ್ರಾಮೀಣ ಆರ್ಥಿಕತೆ, ರೈತರ ಆದಾಯ ಇವೆಲ್ಲವೂ ಕೂಡ ಜಿಡಿಪಿ ಇಳಿಕೆಗೆ ಕಾರಣವಾಗಿವೆ.
ಅಲ್ಲದೇ ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಈ ಯುದ್ಧವೂ 2018 ರ ಜನವರಿ-ಮಾರ್ಚ್ ತಿಂಗಳಿನಲ್ಲಿ ಬಲವಾಗಿ ಬೆಳೆದ ಪರಿಣಾಮ ಜಾಗತಿಕ ಆರ್ಥಿಕತೆಯು ನಿಧಾನವಾಗಲು ಪ್ರಾರಂಭಿಸಿತು. ಹಲವಾರು ಕ್ಷೇತ್ರಗಳಾದ ಉತ್ಪಾದನೆ, ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ ಮತ್ತು ಪ್ರಸಾರ, ಕೃಷಿ ಹೀಗೆ ಇತರ ಕ್ಷೇತ್ರಗಳು ಕುಸಿತ ಕಾಣುತ್ತಿವೆ. ಇನ್ನು ಉತ್ಪಾದನಾ ಬೆಳವಣಿಗೆಯೂ ಹಣಕಾಸು ವರ್ಷ 2020 ರಲ್ಲಿ ಕೇವಲ 0.6% ಆಗಿತ್ತು. ಕಳೆದ 18 ತಿಂಗಳುಗಳಲ್ಲಿ 286 ಕ್ಕೂ ಹೆಚ್ಚು ಮಾರಾಟಗಾರರು ತಮ್ಮ ಮಳಿಗೆಗಳನ್ನು ಮುಚ್ಚಿದ್ದಾರೆ. ಅಲ್ಲದೇ 15,000ಕ್ಕೂ ಹೆಚ್ಚು ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಅರ್ಥಿಕತೆಯ ನಿಧಾನಗತಿಯು ರಚನಾತ್ಮಕ ಅಥವಾ ಆವರ್ತಕ ಅಂಶಗಳಿಂದ ಉಂಟಾಗಿದೆ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಉದಾಹರಣೆಗೆ, ಆಟೋ ವಲಯದ ಬೇಡಿಕೆ ಕುಸಿತವೂ ರಚನಾತ್ಮಕ ಅಂಶಗಳಿಂದಾಗಿರಬಹುದು. ಕೊಟಕ್ ಮಹೀಂದ್ರಾ ಬ್ಯಾಂಕ್ನ ಎಂಡಿ ಉದಯ್ ಕೊಟಕ್ ಅವರು ಚಿಕ್ಕವರಿದ್ದಾಗ ವಾಹನ ಹೊಂದಿರುವುದು ಪ್ರತಿಷ್ಠೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಆದ್ರೆ ಇದೀಗ ಅವರ ಮಗ ಓಲಾ ಅಥವಾ ಉಬರ್ ಮೂಲಕ ಹೋಗಲು ಆದ್ಯತೆ ನೀಡಿದ್ದರಿಂದ, ಕಾರು ಖರೀದಿಸಲು ಬಯಸುತ್ತಿಲ್ಲ ಎನ್ನುತ್ತಾರೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳಿಂದಾಗಿ ಕೆಲವರು ದೊಡ್ಡ ನಗರಗಳಲ್ಲಿ ಕಾರುಗಳನ್ನು ಹೊಂದಲು ಬಯಸುವುದಿಲ್ಲ. ಈ ರಚನಾತ್ಮಕ ಸಮಸ್ಯೆ ವಾಹನ ಮಾರಾಟದಲ್ಲಿನ ಮಂದಗತಿಗೆ ಕಾರಣವಾಗಿದೆ ಎಂದಿದ್ದಾರೆ.
ಇತ್ತೀಚೆಗೆ, ಆರ್‌ಬಿಐನ ಮಾಜಿ ಗವರ್ನರ್ ಡಾ. ವೈ.ವಿ. ರೆಡ್ಡಿ ಅವರು ಆರ್ಥಿಕತೆ ನಿಧಾನಗತಿಯಲ್ಲಿ ಸಾಗಲು ರಚನಾತ್ಮಕ ಅಂಶಗಳ ಸಂಯೋಜನೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಚೀನಾ-ಅಮೆರಿಕದ ವ್ಯಾಪಾರ ಸಂಘರ್ಷ ಮುಂತಾದ ಜಾಗತಿಕ ಅಂಶಗಳು ಮಂದಗತಿಗೆ ಕಾರಣವಾಗಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳುತ್ತಾರೆ.
ಕಳೆದ ಕೆಲವು ದಿನಗಳ ಹಿಂದೆ ಹೂಡಿಕೆಯಲ್ಲಿ ಸುಧಾರಣೆ ತರಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
1. ಈಕ್ವಿಟಿ ಮಾರುಕಟ್ಟೆಗಳಲ್ಲಿ ಬಂಡವಾಳ ಲಾಭದ ಕುರಿತು ವಿದೇಶಿ ಮತ್ತು ದೇಶೀಯ ಬಂಡವಾಳ ಹೂಡಿಕೆದಾರರ ಮೇಲೆ ಸೂಪರ್ ರಿಚ್ ಸರ್ಚಾರ್ಜ್ ನೀಡುವ ವಿವಾದಾತ್ಮಕ ಬಜೆಟ್ ಪ್ರಸ್ತಾಪವನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ವಿದೇಶಿ ಹೂಡಿಕೆದಾರರಿಗೆ ಬಿಗ್ ರಿಲೀಫ್ ನೀಡಿದೆ.
2. ಏಂಜಲ್ ತೆರಿಗೆಯನ್ನು ಹಿಂತೆಗೆದುಕೊಳ್ಳುವುದು.