ನವದೆಹಲಿ: ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದರಿಂದ 2020 ರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್‌ಗೆ 12 ರೂ. ಮತ್ತು ಡೀಸೆಲ್‌ಗೆ 14 ರೂ.ಯಷ್ಟು ಪರಿಹಾರವನ್ನು ಜನಸಾಮಾನ್ಯರಿಗೆ ನೀಡಬೇಕಾಗಿತ್ತು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಸ್‌ಸಿ ಮಿಶ್ರಾ ಹೇಳಿದ್ದಾರೆ.
ಹೆಚ್ಚುವರಿ ಆದಾಯ ಗಳಿಸಲು ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 12 ರೂ. ಮತ್ತು ಡೀಸೆಲ್ ಮೇಲೆ 14 ರೂ.ಯನ್ನು 2020ರ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಹೆಚ್ಚಿಸಿದೆ ಎಂದರು.
ಇದಕ್ಕೆ ಸೇರ್ಪಡೆಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಹೆಚ್ಚುವರಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಪೆಟ್ರೋಲ್‌ಗೆ ₹ 2.5 ಮತ್ತು ಡೀಸೆಲ್‌ಗೆ ₹ 4 ವಿಧಿಸಿದ್ದಾರೆ.