ಕರ್ನಾಟಕ

karnataka

ETV Bharat / business

ಏಕಾಏಕಿ 9 ಟನ್​ ಚಿನ್ನ ಮಾರಿದ ಕೇಂದ್ರ ಸರ್ಕಾರ... ಕಾರಣವೇನು? - undefined

ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಹಣಗಳಿಗೆ ಸ್ಕೀಮ್​ನಡಿ 2019ರ ಫೆಬ್ರವರಿವರೆಗೆ 15,650 ಕೆಜಿ ಗೋಲ್ಡ್​ ಸಂಗ್ರಹಿಸಿದೆ. ಅದರಲ್ಲಿ 9,000 ಕೆಜಿ ಚಿನ್ನವನ್ನು ಮಾರಾಟ ಮಾಡಿದೆ.

ಸಂಗ್ರಹ ಚಿತ್ರ

By

Published : Apr 9, 2019, 7:43 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಲೋಹ ಮತ್ತು ಖನಿಜ ವ್ಯಾಪಾರ ನಿಗಮವು (ಎಂಎಂಟಿಸಿ) ಮಧ್ಯಮ ಹಾಗೂ ದೀರ್ಘಕಾಲಿನ ಸರ್ಕಾರದ ಠೇವಣಿ ಯೋಜನೆ ಅಡಿ 9,000 ಕೆಜಿ ಚಿನ್ನ ಹರಾಜು ಮೂಲಕ ಮಾರಾಟ ಮಾಡಿದೆ.

ಚಿನ್ನದ ಮೇಲಿನ ಹಣಗಳಿಕೆ ಯೋಜನೆಯ ಹೆಚ್ಚುವರಿ ಲಾಭದ ಆದಾಯ ಪಡೆದ ಕೇಂದ್ರ, ಸಾವಿರಾರೂ ಕೋಟಿ ರೂಪಾಯಿ ತನ್ನ ಖಜಾನೆಗೆ ಸೇರಿಸಿಕೊಂಡಿದೆ. ಹಳದಿ ಲೋಹದ ಆಮದು ಹಾಗೂ ದೇಶದ ಚಾಲ್ತಿ ಖಾತೆ ಕೊರತೆ ಸರಿದೂಗಿಸಲು ಇದು ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಹಣಗಳಿಕೆ ಯೋಜನೆಯಡಿ 2019ರ ಫೆಬ್ರವರಿವರೆಗೆ 15,650 ಕೆಜಿ ಗೋಲ್ಡ್​ ಸಂಗ್ರಹಿಸಿದೆ. ಅಲ್ಪಾವಧಿ ಚಿನ್ನದ ಠೇವಣಿ ಹೂಡಿಕೆಯಡಿ 6,584 ಕೆಜಿ, ಮಧ್ಯಮ ಅವಧಿ ಚಿನ್ನದ ಠೇವಣಿ ಹೂಡಿಕೆಯಡಿ 2,938 ಹಾಗೂ ದೀರ್ಘಾವಧಿಯ ಚಿನ್ನದ ಠೇವಣಿ ಹೂಡಿಕೆಯಡಿ 6,128 ಕೆಜಿ ಗೋಲ್ಡ್​ ಸಂಗ್ರಹಿಸಿತ್ತು. ಅದರಲ್ಲಿ 9,000 ಕೆಜಿ ಚಿನ್ನವನ್ನು ಮಾರಾಟ ಮಾಡಲಾಗಿದೆ.

ಚಿನ್ನದ ಹಣಗಳಿಕೆ ಯೋಜನೆಯಡಿ, ಸರ್ಕಾರವು ನಿಶ್ಚಿತ ಅವಧಿಯವರೆಗೆ ಜನರಿಂದ ಐಡಲ್ (ಸನಾತನ ವೌಲ್ಯ) ಚಿನ್ನ ಸಂಗ್ರಹಿಸುತ್ತದೆ. ಅದರ ಮೇಲೆ ಶೇ 2.5ರವರೆಗೆ ಬಡ್ಡಿ ಪಾವತಿಸಿ ತದನಂತರ ಅವಧಿ ಅಂತ್ಯದಲ್ಲಿ ಮೂಲ ಠೇವಣಿಗೆ ಸಮಾನ ಮೊತ್ತ ಹಿಂದಿರುಗಿಸುತ್ತದೆ.

ಮನೆ ಮತ್ತು ಸಂಸ್ಥೆಗಳಲ್ಲಿ ಕೊಳೆಯುತ್ತಿದ್ದ ಐಡಲ್​ ಚಿನ್ನವನ್ನು ಹೊರ ತರಲು ಕೇಂದ್ರ ಸರ್ಕಾರ 2015ರ ಸೆಪ್ಟೆಂಬರ್​ನಲ್ಲಿ ಚಿನ್ನದ ಮೇಲೆ ಹಣಗಳಿಕೆ ಯೋಜನೆ ಆರಂಭಿಸಿತ್ತು. ಬಳಿಕ ಭಾರತ ಚೀನಾ ನಂತರ ಎರಡನೇ ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೃಹತ್ ಚಿನ್ನದ ಆಮದು ಭಾರತದ ಚಾಲ್ತಿ ಖಾತೆಯ ಮೇಲಿನ ಒತ್ತಡ ತಂದಿತ್ತು. ಈಗ 9,000 ಕೆಜಿ ಚಿನ್ನ ಮಾರುವ ಮೂಲಕ ಚಾಲ್ತಿ ಖಾತೆ ಸರಿದೂಗಿಸಿ ಮಾರುಕಟ್ಟೆಯಲ್ಲಿ ನಗದು ಹರಿವಿನ ಪ್ರಮಾಣ ಹೆಚ್ಚಿಸುಲು ಭಾರತ ಸರ್ಕಾರ ಮುಂದಾಗಿದೆ.

For All Latest Updates

TAGGED:

ABOUT THE AUTHOR

...view details