ಕರ್ನಾಟಕ

karnataka

ETV Bharat / business

ಬ್ಯಾರೆಲ್​ ತೈಲಕ್ಕೆ 30 ಡಾಲರ್​​... ಪೆಟ್ರೋಲ್, ಡೀಸೆಲ್​ನಲ್ಲಿ ₹ 10 ಇಳಿಸುವ ಬದಲು ಮತ್ತೆ ಸುಂಕ ಏರಿಕೆ..! - SBI

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಯೇ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೊರತೆಯ ಅಭಾವ ತಗ್ಗಿಸಲು ಹಾಗೂ ಹೆಚ್ಚುವರಿ ವೆಚ್ಚ ಸಂಗ್ರಹಕ್ಕೆ ಅನುಕೂಲ ಮಾಡಿಕೊಳ್ಳಲು ಪೆಟ್ರೋಲ್ ಹಾಗೂ ಡೀಸೆಲ್​ ಮೇಲೆ ಸುಂಕ ಏರಿಸಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಭವಿಷ್ಯ ನುಡಿದಿದೆ.

Oil
ತೈಲ

By

Published : Mar 19, 2020, 7:31 PM IST

ನವದೆಹಲಿ:ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿ ಕಚ್ಚಾ ತೈಲದ ದರ ಇಳಿಕೆಯಾಗಿದ್ದು, ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶನಿವಾರವಷ್ಟೇ ಹೆಚ್ಚಳ ಮಾಡಿತ್ತು. ಈಗ ಮತ್ತೊಂದು ಸುತ್ತಿನ ಹೆಚ್ಚಳ ಮಾಡಬಹುದು ಎಂದು ಎಸ್​ಬಿಐ ಅಂದಾಜಿಸಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಯೇ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೊರತೆಯ ಅಭಾವ ತಗ್ಗಿಸಲು ಹಾಗೂ ಹೆಚ್ಚುವರಿ ವೆಚ್ಚ ಸಂಗ್ರಹಕ್ಕೆ ಅನುಕೂಲ ಮಾಡಿಕೊಳ್ಳಲು ಪೆಟ್ರೋಲ್ ಹಾಗೂ ಡೀಸೆಲ್​ ಮೇಲೆ ಸುಂಕ ಏರಿಸಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಭವಿಷ್ಯ ನುಡಿದಿದೆ.

ಪ್ರತಿ ಬ್ಯಾರೆಲ್‌ ಕಚ್ಚಾ ತೈಲ 30 ಡಾಲರ್​ ನಷ್ಟಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ ಮೇಲೆ 10-12 ರೂ.ಗಳಷ್ಟು ಕಡಿಮೆಗೊಳಿಸಬಹುದು. ಅಬಕಾರಿ ಸುಂಕ ಹಿಂದಿನ ಮಟ್ಟದಲ್ಲಿ ಉಳಿದಿದೆ ಎಂದು ಭಾವಿಸಿ, ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಬೆಲೆಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸಬಹುದು ಎಂದು ಹೇಳಿದೆ.

ಶನಿವಾರ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ.ಗೂ ಅಧಿಕವಾಗಿ ಏರಿಕೆ ಮಾಡಿ, ಈ ಮೂಲಕ ವಾರ್ಷಿಕವಾಗಿ ₹ 45,000 ಕೋಟಿ ಆದಾಯ ಸಂಗ್ರಹದ ಗುರಿಯನ್ನು ಇರಿಸಿಕೊಳ್ಳಬಹುದು ಎಂದಿದೆ.

ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 3 ರೂ. ಅಬಕಾರಿ ಸುಂಕವನ್ನು ಹೆಚ್ಚಿಸುವುದರಿಂದ ಪ್ರಸ್ತುತ ಮಟ್ಟದಿಂದ ಗರಿಷ್ಠ 4.25 ರೂ. ಮತ್ತು ಡೀಸೆಲ್ ಮೇಲೆ 3.75 ರೂ. ಮೂಲಕ ಅಬಕಾರಿ ಸುಂಕ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಎಸ್‌ಬಿಐ ಇಕೋವ್ರಾಪ್ ವರದಿ ತಿಳಿಸಿದೆ.

ಕೋವಿಡ್​-19​ ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಸೇವೆಗಳ ಉಪವಲಯದ ಮೂಲಕ ಜಿಡಿಪಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಹಣಕಾಸಿನ ಕೊರತೆಯ ಮೇಲೆ ಜಿಡಿಪಿಯ ಶೇಕಡಾವಾರಿಗೆ ಒತ್ತಡವನ್ನು ಸೃಷ್ಟಿಸುತ್ತದೆ. 2021ರಲ್ಲಿನ ನಾಮಮಾತ್ರ ಜಿಡಿಪಿ ಬೆಳವಣಿಗೆಯು ಶೇ 10 ರಷ್ಟಿದೆ. ಆ ವರ್ಷದ ನಾಮಮಾತ್ರ ಜಿಡಿಪಿ ಸಂಖ್ಯೆಯಲ್ಲಿ ಪ್ರತಿ 10 ಬಿಪಿಎಸ್ ಕುಸಿತವು ಹಣಕಾಸಿನ ಕೊರತೆಯು ಸುಮಾರು ಒಂದು ಅಂಶದಷ್ಟು ಏರಿಕೆಗೆ ಕಾರಣವಾಗುತ್ತದೆ. ಶೇ 5ರಷ್ಟು ಅಸಮರ್ಥತೆ ತಂದೊಡ್ಡುವ ಆಘಾತವು ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂಪರ್ಕ, ಸಂಗ್ರಹಣೆ ಮತ್ತು ಸಂವಹನ ವಿಭಾಗದಿಂದ ಜಿಡಿಪಿಗೆ 90 ಬೇಸಿಸ್ ಪಾಯಿಂಟ್ ಆಗಿರಬಹುದೆಂದು ಈಗಾಗಲೇ ಅಂದಾಜು ಮಾಡುತ್ತಿದ್ದೇವೆ. ಅದು 2020 ಮತ್ತು 2021ರ ಹಣಕಾಸಿನ ವರ್ಷದವರೆಗೆ ಹಬ್ಬಿ 2021ರಲ್ಲಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ವಿವರಿಸಿದೆ.

ABOUT THE AUTHOR

...view details