ನವದೆಹಲಿ:ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಈರುಳ್ಳಿ ರಫ್ತು ನಿಷೇಧಿಸಿದೆ.
ಎಲ್ಲಾ ವಿಧದ ಈರುಳ್ಳಿಗಳ ರಫ್ತನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯದ ನಿರ್ದೇಶಕ ಪ್ರಕಟಣೆ ಹೊರಡಿಸಿದ್ದಾರೆ.
ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸೆಪ್ಟೆಂಬರ್ 13ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯದ ನಿರ್ದೇಶಕ ಈರುಳ್ಳಿ ರಫ್ತಿಗೆ ಕನಿಷ್ಠ ದರ ನಿಗದಿಪಡಿಸಿತ್ತು.
ಪ್ರಸ್ತುತ ಈರುಳ್ಳಿ ಬೆಲೆ ಗಗನಮುಖಿಯಾಗಿದ್ದು ಕೆಜಿಗೆ ಸುಮಾರು ₹60 ರೂ.ನಿಂದ ₹80ರೂ.ತನಕ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಮಾರಾಟವಾಗುತ್ತಿವೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಾಗೂ ನೆರೆಯ ಪರಿಣಾಮ ಈರುಳ್ಳಿ ಬೆಲೆ ಶ್ರೀಸಾಮಾನ್ಯ ಕಣ್ಣಲ್ಲಿ ನೀರು ತರಿಸುತ್ತಿದೆ.