ಕರ್ನಾಟಕ

karnataka

ETV Bharat / business

Covid-19 ತಂದಿಟ್ಟ ಬಿಕ್ಕಟ್ಟು: 8 ಅಂಶಗಳ ವಿಶೇಷ ಪ್ಯಾಕೇಜ್​ ಘೋಷಿಸಿದ Sitaraman - 8 ಅಂಶಗಳ ಪ್ಯಾಕೇಜ್​ ಘೋಷಣೆ

ಕೊರೊನಾ ಎರಡನೇ ಅಲೆಗೆ ದೇಶದ ಆರ್ಥಿಕತೆ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಕೆಲವೊಂದು ವಲಯಗಳಿಗೆ ಕೇಂದ್ರ ಹಣಕಾಸು ಇಲಾಖೆ ಇದೀಗ ಚೇತರಿಕೆ ನೀಡುವ ಕೆಲಸ ಮಾಡಿದೆ.

nirmala sitharaman
nirmala sitharaman

By

Published : Jun 28, 2021, 5:42 PM IST

ನವದೆಹಲಿ:2ನೇ ಹಂತದ ಕೋವಿಡ್ ಅಲೆಯಿಂದ ದೇಶದ ಆರ್ಥಿಕತೆ ಮತ್ತೊಮ್ಮೆ ತತ್ತರಿಸಿ ಹೋಗಿದೆ. ವಿವಿಧ ವಲಯಗಳು ಸಂಪೂರ್ಣವಾಗಿ ನೆಲಕಚ್ಚಿರುವ ಕಾರಣ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್​​ ಅವುಗಳಿಗೆ ಚೇತರಿಕೆ ನೀಡಲು ಮುಂದಾಗಿದ್ದಾರೆ. ಅದೇ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿರುವ ವಿತ್ತ ಸಚಿವೆ ಕೆಲವೊಂದು ಮಹತ್ವದ ಘೋಷಣೆ ಹೊರ ಹಾಕಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್​

ಎರಡನೇ ಹಂತದ ಕೋವಿಡ್​ ಅಲೆಯಿಂದ ದೇಶದ ಅರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶದಿಂದ ನಿರ್ಮಲಾ ಸೀತಾರಾಮನ್​8 ಅಂಶಗಳ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ. ಪ್ರಮುಖವಾಗಿ ಕೋವಿಡ್ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಖಾತ್ರಿ ಯೋಜನೆ ಘೋಷಣೆ ಮಾಡಿರುವ ನಿರ್ಮಲ ಸೀತಾರಾಮನ್​ ಆರೋಗ್ಯ ವಲಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿರಿ: ಸಾಲ ಖಾತರಿ ಯೋಜನೆಯಡಿ 25 ಲಕ್ಷ ಮಂದಿಗೆ ಮೈಕ್ರೋ ಫೈನಾನ್ಸ್‌ ಮೂಲಕ ಸಾಲ: ಸೀತಾರಾಮನ್‌ ಘೋಷಣೆ

ಸೀತಾರಾಮನ್​ 8 ಅಂಶಗಳ ಪ್ಯಾಕೇಜ್​

  1. ಆರೋಗ್ಯ ಕ್ಷೇತ್ರಕ್ಕೆ 50,000 ,ಕೋಟಿ. ರೂ. ಸಾಲ ಯೋಜನೆ, ಮಕ್ಕಳ ಆರೋಗ್ಯಕ್ಕಾಗಿ 23,220 ಕೋಟಿ ರೂ.
  2. ಕೋವಿಡ್ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಉಳಿದಂತೆ ಇತರೆ ವಲಯಗಳಿಗೆ 60,000 ಕೋಟಿ ರೂ
  3. ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ಮೂಲಕ 25 ಲಕ್ಷ ಜನರಿಗೆ ಕ್ರೆಡಿಟ್​ ಸಾಲ ಯೋಜನೆ
  4. ಪ್ರವಾಸೋದ್ಯಮ ಪುನರ್​ ಅಭಿವೃದ್ಧಿಗೆ ಗೈಡ್​ಗಳಿಗೆ ಆರ್ಥಿಕ ಸಹಾಯ, 11,000 ನೋಂದಣಿಗೊಂಡ ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಸಾಲ
  5. 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ
  6. ಆತ್ಮನಿರ್ಭರ್​ ಭಾರತ್​ ರೋಜಗಾರ್ ಯೋಜನೆ ವಿಸ್ತರಣೆ
  7. ರಸಗೊಬ್ಬರಗಳ ಮೇಲಿ ಹೆಚ್ಚುವರಿ ಸಬ್ಸಿಡಿ ಹೆಚ್ಚುವರಿಯಾಗಿ 14,7555 ಕೋಟಿ ರೂ.
  8. ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಅನ್ನ ಯೋಜನೆ ವಿಸ್ತರಣೆ ಇದಕ್ಕಾಗಿ 2,27,841 ಕೋಟಿ ರೂ. ಮೀಸಲು

ಈ ಹಿಂದೆ ಕೂಡ ದೇಶದಲ್ಲಿ ಕೋವಿಡ್​ ಅಲೆ ಎದುರಾಗಿದ್ದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದರು. ಈ ವೇಳೆ ಆತ್ಮನಿರ್ಭರ್ ಭಾರತ್ ಅಭಿಯಾನ್​ದಡಿ ವಿವಿಧ ವಲಯಗಳಿಗೆ ಹಣ ನೀಡಲಾಗಿತ್ತು.

ABOUT THE AUTHOR

...view details