ನವದೆಹಲಿ:ಪೆಟ್ರೋಲ್ ಮಿಶ್ರಣಕ್ಕಾಗಿ ಬಳಸುವ ಕಬ್ಬಿನ ತ್ಯಾಜ್ಯದಿಂದ ಹೊರತೆಗೆಯಲಾದ (ಜೈವಿಕ ಇಂಧನ) ಎಥೆನಾಲ್ನ ಪ್ರತಿ ಲೀಟರ್ ಮೇಲೆ 1.84 ರೂ. ದರ ಏರಿಸಲಾಗಿದೆ. ಈ ಮೂಲಕ ತೈಲ ಆಮದು ಪ್ರಮಾಣವನ್ನು ವಾರ್ಷಿಕ 1 ಬಿಲಿಯನ್ ಡಾಲರ್ ಕಡಿತಗೊಳಿಸುವ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯ ಬಳಿಕ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಆರ್ಥಿಕ ಸಚಿವಾಲಯ ಶಿಫಾರಸ್ಸಿನ ಮೇರೆಗೆ ದರ ಏರಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ತೈಲ ಆಮದು ಪ್ರಮಾಣವನ್ನು ವಾರ್ಷಿಕ 1 ಬಿಲಿಯನ್ ಡಾಲರ್ ಕಡಿತಗೊಳಿಸುವ ಉದ್ದೇಶವಿದೆ ಎಂದು ಬೆಲೆ ಏರಿಕೆಗೆ ಕಾರಣ ಕೊಟ್ಟರು.
ಸಿ-ಹೆವಿ ಕಾಕಂಬಿಯಿಂದ ತಯಾರಿಸುವ ಎಥೆನಾಲ್ ದರದಲ್ಲಿ 29 ಪೈಸೆ ಹೆಚ್ಚಿಸಿ ₹ 43.75ಗೆ ಹಾಗೂ ಬಿ- ಹೆವಿ ಕಾಕಂಬಿಯಿಂದ ತಯಾರಿಸಲಾಗುವ ಎಥೆನಾಲ್ ದರವನ್ನು ₹ 1.84 ಏರಿಕೆ ಮಾಡಿ ₹ 54.27ಕ್ಕೆ ನಿಗದಿಪಡಿಸಲಾಗಿದೆ.