ಕರ್ನಾಟಕ

karnataka

ETV Bharat / business

ಆಭರಣ ಉದ್ಯಮಕ್ಕೆ ಕಗ್ಗತ್ತಲಾದ ಧನ್​ತೇರಸ್: ದೀಪಾವಳಿ ವೇಳೆಗೆ 6,550 ರೂ. ಜಿಗಿದ ಬಂಗಾರ..!

ಶುಕ್ರವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 220 ರೂ. ಏರಿಕೆಯಾಗಿ ₹ 39,240ರಲ್ಲಿ ಮಾರಾಟ ಆಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ ಬಂಗಾರದ ದರದಲ್ಲಿ ಶೇ 20ರಷ್ಟು ಏರಿಕೆಯಾಗಿದೆ. ಈ ಹಿಂದೆ 10 ಗ್ರಾಂ. ಚಿನ್ನ ₹ 32,690 ಗೆ ಮಾರಾಟ ಆಗುತ್ತಿತ್ತು. ಈ ಒಂದು ವರ್ಷದಲ್ಲಿ ಚಿನ್ನದ ಬೆಲೆ 6,550 ರೂ.ಯಷ್ಟು ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 26, 2019, 8:39 PM IST

ನವದೆಹಲಿ: ಚಿನ್ನಾಭರಣಗಳ ಖರೀದಿಗೆ ಶುಭ ದಿನವಾದ ಧನ್​ತೇರಸ್ ಸಂದರ್ಭದಲ್ಲಿ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡುಬರಲಿಲ್ಲ. ಈ ವೇಳೆ ಚಿನ್ನಾಭರಣ ಮಾರಾಟದಲ್ಲಿ ಶೇ 40ರಷ್ಟು ಇಳಿಕೆಯಾಗಿದೆ.

ಶುಕ್ರವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 220 ರೂ. ಏರಿಕೆಯಾಗಿ ₹ 39,240ರಲ್ಲಿ ಮಾರಾಟ ಆಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ ಬಂಗಾರದ ದರದಲ್ಲಿ ಶೇ 20ರಷ್ಟು ಏರಿಕೆಯಾಗಿದೆ. ಈ ಹಿಂದೆ 10 ಗ್ರಾಂ. ಚಿನ್ನ ₹ 32,690 ಗೆ ಮಾರಾಟ ಆಗುತ್ತಿತ್ತು. ಈ ಒಂದು ವರ್ಷದಲ್ಲಿ ಚಿನ್ನದ ಬೆಲೆ 6,550 ರೂ.ಯಷ್ಟು ಏರಿಕೆಯಾಗಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅನ್ವಯ, ನಿನ್ನೆಯ (ಶುಕ್ರವಾರ) ಸಂಜೆಯ ವೇಳೆಗೆ 6,000 ಕೆ.ಜಿ ಚಿನ್ನ ಮಾರಾಟವಾಗಿ ಅಂದಾಜು ₹ 2,500 ಕೋಟಿಯಷ್ಟು ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ಧನ್​ತೇರಸ್​ನಂದು 17,000 ಕೆ.ಜಿ ಚಿನ್ನ ಮಾರಾಟವಾಗಿ ₹ 5,500 ಕೋಟಿಯಷ್ಟು ವಹಿವಾಟು ನಡೆದಿತ್ತು ಎಂದು ತಿಳಿಸಿದೆ.

ಜುಲೈ ತಿಂಗಳಲ್ಲಿ ದಿಢೀರನೆ ಚಿನ್ನದ ದರ ಏರಿಕೆ ಕಂಡಿರುವುದು ಹಾಗೂ ಮಂದಗತಿಯ ಆರ್ಥಿಕ ಬೆಳವಣಿಗೆಯ ಕಾರಣ ಗ್ರಾಹಕರು ಮಾಡುವ ವೆಚ್ಚದಲ್ಲಿ ಕುಸಿದಿರುವುದರಿಂದ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ABOUT THE AUTHOR

...view details