ಕರ್ನಾಟಕ

karnataka

ETV Bharat / business

ಬಂಗಾರದ ಬೆಲೆಯಲ್ಲಿ ದಾಖಲೆಯ ಇಳಿಕೆ..ಬೆಂಗಳೂರಲ್ಲಿ 10 ಗ್ರಾಂಗೆ ಎಷ್ಟು..? - ಬಂಗಾರದ ಬೆಲೆಯಲ್ಲಿ ದಾಖಲೆಯ ಇಳಿಕೆ

ಕಳೆದ ಕೆಲ ದಿನಗಳಿಂದ ಚಿನ್ನಾಭರಣದ ಬೆಲೆಯಲ್ಲಿ ನಿರಂತರವಾಗಿ ದಾಖಲೆ ಪ್ರಮಾಣದ ಇಳಿಕೆ ಕಂಡು ಬರುತ್ತಿದ್ದು, ಇದರಿಂದ ಆಭರಣ ಖರೀದಿ ಮಾಡಲು ಇದು ಒಳ್ಳೆಯ ಟೈಂ ಕೂಡಿ ಬಂದಿದೆ.

Gold rate
Gold rate

By

Published : Aug 11, 2021, 3:59 PM IST

Updated : Aug 11, 2021, 4:14 PM IST

ಹೈದರಾಬಾದ್​:ಕಳೆದ ಕೆಲ ದಿನಗಳಿಂದ ಚಿನ್ನಾಭರಣದ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರುತ್ತಿದ್ದು, ಇಂದೂ ಕೂಡ ಬಂಗಾರದ ಬೆಲೆ ಕಡಿಮೆಯಾಗಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ದಾಖಲೆ ಪ್ರಮಾಣದ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಕಡಿಮೆಗೊಳ್ಳುತ್ತಿರುವುದೇ ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದ್ದು, ಸದ್ಯ 10 ಗ್ರಾಂ. ಚಿನ್ನದ ಬೆಲೆ(22 ಕ್ಯಾರೆಟ್​) 44,600 ರೂ. ಆಗಿದೆ.

ಯಾವ ನಗರದಲ್ಲಿ ಎಷ್ಟಿದೆ ಚಿನ್ನದ ಬೆಲೆ(ಪ್ರತಿ 10 ಗ್ರಾಂ)

  • ಚೆನ್ನೈ: 43,720 ರೂ.(22 ಕ್ಯಾರೆಟ್​ ಗೋಲ್ಡ್​)
  • ಮುಂಬೈ: 45,280 ರೂ.
  • ನವದೆಹಲಿ: 45,500 ರೂ.
  • ಕೋಲ್ಕತ್ತಾ: 45,700 ರೂ.
  • ಬೆಂಗಳೂರು: 43,350 ರೂ.
  • ಹೈದರಾಬಾದ್​​: 43,350 ರೂ.
  • ಕೇರಳ: 43,350 ರೂ.
  • ಪುಣೆ: 44,620 ರೂ.
  • ಲಖನೌ: 45,500 ರೂ.
  • ಪಾಟ್ನಾ: 44,620 ರೂ.
  • ನಾಗ್ಪುರ​: 45,280 ರೂ.

ಬೆಳ್ಳಿ ಬೆಲೆಯಲ್ಲೂ 107 ರೂ. ಇಳಿಕೆಯಾಗಿದ್ದು, ಈ ಮೂಲಕ ಪ್ರತಿ 1 ಕೆಜಿ ಬೆಳ್ಳಿ ಬೆಲೆ 62,534 ರೂ. ಆಗಿದೆ. ಕಳೆದ ಕೆಲ ದಿನಗಳಿಂದ ಬೆಲೆ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡು ಬರುತ್ತಿರುವ ಕಾರಣ ಆಭರಣ ಪ್ರೀಯರು ಹೆಚ್ಚಿನ ಚಿನ್ನದ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಮೊನ್ನೆಯಷ್ಟೇ ಬಂಗಾರದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 317ರೂ ಕುಸಿತ ಕಂಡಿತ್ತು. ಇದರ ಬೆನ್ನಲ್ಲೇ ನಿನ್ನೆ ಕೂಡ 176 ರೂ ಇಳಿಕೆಯಾಗಿತ್ತು.

ಇದನ್ನೂ ಓದಿರಿ: ಕೇರಳದಲ್ಲಿ ಕೊರೊನಾ ಆರ್ಭಟ: ವ್ಯಾಕ್ಸಿನ್ ಪಡೆದ 40 ಸಾವಿರ ಜನರಿಗೆ ಕೋವಿಡ್ ಸೋಂಕು!

Last Updated : Aug 11, 2021, 4:14 PM IST

ABOUT THE AUTHOR

...view details