ಕರ್ನಾಟಕ

karnataka

ETV Bharat / business

ಮಾಯದಂಥ ಚಿನ್ನದ ಓಟಕ್ಕೆ ಬ್ರೇಕ್: ಏಕಾಏಕಿ 4,242 ರೂ. ಕುಸಿದ ಬೆಳ್ಳಿ, ಹೇಗೆ ಗೊತ್ತೇ? - ಬೆಳ್ಳಿ ದರ

ಸತತ ಎರಡನೇ ದಿನ ಬುಧವಾರ ಚಿನ್ನದ​ ದರ ಕುಸಿಯಿತು. ಪ್ರಸ್ತುತ, ಮಲ್ಟಿ-ಕಮೋಡಿಟಿ ಎಕ್ಸ್​ಚೇಂಜ್​ನಲ್ಲಿ (ಎಂಸಿಎಕ್ಸ್) ಅಕ್ಟೋಬರ್​ ಚಿನ್ನದ ಒಪ್ಪಂದವು 10 ಗ್ರಾಂ.ಗೆ 51,672 ರೂ.ಗೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ದರಕ್ಕಿಂತ ₹ 257 ಅಥವಾ ಶೇ 0.49ರಷ್ಟು ಕ್ಷೀಣಿಸಿದೆ.

Gold
ಚಿನ್ನ

By

Published : Aug 12, 2020, 3:47 PM IST

ನವದೆಹಲಿ: ಪ್ರತಿ ದಿನವೂ ಹೊಸ ಗರಿಷ್ಠ ಮಟ್ಟ ತಲುಪುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯಲು ಪ್ರಾರಂಭಿಸಿದೆ.

ಸುರಕ್ಷಿತ ಹೂಡಿಕೆಯ ಸ್ವತ್ತು ಎಂದು ಪರಿಗಣಿಸಲ್ಪಟ್ಟ ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ರಷ್ಯಾ. ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್​ಗೆ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ ರಷ್ಯಾ, ಅಧಿಕೃತ ಬಳಕೆಗೆ ನೋಂದಣಿ ಸಹ ಮಾಡಿಸಿದೆ.

ಪ್ರಸ್ತುತ, ಮಲ್ಟಿ-ಕಮೋಡಿಟಿ ಎಕ್ಸ್​ಚೇಂಜ್​ನಲ್ಲಿ (ಎಂಸಿಎಕ್ಸ್) ಅಕ್ಟೋಬರ್​ ಚಿನ್ನದ ಒಪ್ಪಂದವು 10 ಗ್ರಾಂ.ಗೆ 51,672 ರೂ.ಗೆ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ದರಕ್ಕಿಂತ ₹ 257 ಅಥವಾ ಶೇ 0.49ರಷ್ಟು ಕ್ಷೀಣಿಸಿದೆ.

ಅಮೆರಿಕದ ಬಾಂಡ್ ಇಳುವರಿ ಮುಂದುವರೆದಿದ್ದು, ಡಾಲರ್ ಚೇತರಿಸಿಕೊಂಡಂತೆ ಚಿನ್ನದ ಬೆಲೆಗಳು ಕುಸಿದ ಅಂತಾರಾಷ್ಟ್ರೀಯ ಸ್ಪಾಟ್ ಬೆಲೆಗಳಲ್ಲಿ ಸಹ ಇಳಿಕೆ ಕಂಡುಬಂದಿದೆ.

ಬುಲಿಯನ್ ಮಾರುಕಟ್ಟೆಯಲ್ಲಿನ ಭಾವನೆಗಳು ಇನ್ನೂ ಸದೃಢವಾಗಿವೆ. ಹಳದಿ ಲೋಹವು ಶೀಘ್ರದಲ್ಲೇ ಮೇಲಕ್ಕೆ ಮರಳುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಕೆ.ಜಿ.ಗೆ 70,000 ರೂ. ದಾಖಲೆಯ ಮಟ್ಟಕ್ಕೆ ಏರಿದ ಬೆಳ್ಳಿಯ ಫ್ಯೂಚರ್​ ದರವು 66,000 ರೂ.ಗಿಂತ ಕಡಿಮೆಯಾಗಿದೆ. ಸೆಪ್ಟೆಂಬರ್ ಬೆಳ್ಳಿಯ ಒಪ್ಪಂದವು ಪ್ರತಿ ಕೆ.ಜಿ.ಗೆ 65,758 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ. ಈ ಹಿಂದಿನ ದರಕ್ಕಿಂತ 1,176 ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ಕೆಲವು ವಾರಗಳ ಅಂತರದಲ್ಲಿ 4,242 ರೂ.ಯಷ್ಟು ಕುಸಿತ ಕಂಡಿದೆ.

ABOUT THE AUTHOR

...view details