ಕರ್ನಾಟಕ

karnataka

ETV Bharat / business

ದರ ಏರಿಕೆ ಬಳಿಕ ಕುಸಿತದ ಹಾದಿಗೆ ಬಂದ ಚಿನ್ನ-ಬೆಳ್ಳಿ: ಜೂ.3ರ ಗೋಲ್ಡ್ ರೇಟ್ ಇಲ್ಲಿದೆ - ಇಂದಿನ ಚಿನ್ನದ ದರ

ದೆಹಲಿಯಲ್ಲಿ 10 ಗ್ರಾಂ. ಶುದ್ಧ ಬಂಗಾರದ ಬೆಲೆ 339 ರೂ.ಗಳಷ್ಟು ಇಳಿದು 48,530 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ 10 ಗ್ರಾಂ. ಶುದ್ಧ ಚಿನ್ನದ ಬೆಲೆ 48,869 ರೂ.ಗಳಷ್ಟು ಇತ್ತು. ಅಂತಾರಾಷ್ಟ್ರೀಯ ಲೋಹದ ಬೆಲೆಗಳು ಕಡಿಮೆ ಆಗಿದ್ದು ಇದಕ್ಕೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

Gold
Gold

By

Published : Jun 3, 2021, 7:34 PM IST

ನವದೆಹಲಿ:ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದ ಬಳಿಕ ಗುರುವಾರದ ವಹಿವಾಟಿನಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿಯಿತು.

ದೆಹಲಿಯಲ್ಲಿ 10 ಗ್ರಾಂ. ಶುದ್ಧ ಬಂಗಾರದ ಬೆಲೆ 339 ರೂ.ಯಷ್ಟು ಇಳಿದು 48,530 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ 10 ಗ್ರಾಂ. ಶುದ್ಧ ಚಿನ್ನದ ಬೆಲೆ 48,869 ರೂ.ಯಷ್ಟು ಇತ್ತು. ಅಂತಾರಾಷ್ಟ್ರೀಯ ಲೋಹದ ಬೆಲೆಗಳು ಕಡಿಮೆ ಆಗಿದ್ದು ಇದಕ್ಕೆ ಕಾರಣವೆಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

ಮತ್ತೊಂದೆಡೆ ಬೆಳ್ಳಿಯ ಬೆಲೆಯೂ ಕುಸಿತ ಕಂಡಿದೆ. ಬೆಳ್ಳಿ ಪ್ರಸ್ತುತ ಕೆಜಿಗೆ 70,772 ರೂ.ಗೆ ವಹಿವಾಟು ನಡೆಸುತ್ತಿದೆ. ಹಿಂದಿನ ದರದ 71,247 ರೂ. ಮೇಲೆ 475 ರೂ. ಕಡಿತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1893 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಬೆಳ್ಳಿ ಔನ್ಸ್‌ಗೆ. 27.79 ಡಾಲರ್​ಗೆ ವಹಿವಾಟು ನಿರತವಾಗಿದೆ.

ABOUT THE AUTHOR

...view details