ಕರ್ನಾಟಕ

karnataka

By

Published : Oct 8, 2020, 5:10 PM IST

ETV Bharat / business

ಇನ್ಮೇಲೆ ಬೆಳ್ಳಿ ಖರೀದಿ ಕಷ್ಟ - ಕಷ್ಟ: ಒಂದೇ ದಿನ 1,074 ರೂ. ಜಿಗಿತ​: ಚಿನ್ನದ ದರ ಎಷ್ಟಾಗಿರಬಹುದು?

ಅಮೂಲ್ಯವಾದ ಲೋಹವು ಹಿಂದಿನ ದಿನದಲ್ಲಿ 10 ಗ್ರಾಂ.ಗೆ 51,071 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 61,085 ರೂ.ಗಳಿಂದ 1,074 ರೂ. ಏರಿಕೆಯಾಗಿ 62,159 ರೂ.ಗೆ ತಲುಪಿದೆ.

silver
ಬೆಳ್ಳಿ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಗಳಿಸುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಗುರುವಾರ 10 ಗ್ರಾಂ.ಗೆ 82 ರೂ. ಏರಿಕೆಯಾಗಿದೆ. ಈ ಮೂಲಕ 51,153 ರೂ. ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಳದಿ ಲೋಹವು ಹಿಂದಿನ ದಿನದಲ್ಲಿ 10 ಗ್ರಾಂ.ಗೆ 51,071 ರೂ. ದರದಲ್ಲಿ ಮಾರಾಟ ಆಗುತ್ತಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 61,085 ರೂ.ಗಳಿಂದ 1,074 ರೂ. ಏರಿಕೆಯಾಗಿ 62,159 ರೂ.ಗೆ ತಲುಪಿದೆ.

ಅಂತಾರಾಷ್ಟ್ರೀಯ ಪೇಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳದಿಂದ ದೆಹಲಿಯಲ್ಲಿ ಕೂಡ 24 ಕ್ಯಾರೆಟ್‌ ಸ್ಪಾಟ್ ಚಿನ್ನದ ಬೆಲೆಯಲ್ಲಿ 82 ರೂ. ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,891 ಡಾಲರ್ ಇದ್ದರೆ, ಬೆಳ್ಳಿ ಔನ್ಸ್‌ಗೆ 24 ಡಾಲರ್‌ಗೆ ಏರಿಕೆಯಾಗಿದೆ. ಅಮೆರಿಕದ ಆರ್ಥಿಕ ಚೇತರಿಕೆಯ ಅನಿಶ್ಚಿತತೆಯ ಮೇಲೆ ಡಾಲರ್ ಏರಿಳಿತ ಮತ್ತು ಚಿನ್ನದ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತಿದೆ.

ABOUT THE AUTHOR

...view details