ನವದೆಹಲಿ: ಚಿನ್ನದ ಬೆಲೆಯು 10 ಗ್ರಾಂಗೆ 761 ರೂ. ಏರಿಕೆಯಾಗಿದ್ದು, 48,414 ರೂ.ಗೆ ಬಂದು ನಿಂತಿದೆ.
ಮಂಗಳವಾರ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿದು 76.20 ಕ್ಕೆ ತಲುಪಿದ ಕಾರಣ ಬಂಗಾರದ ಬೆಲೆ ಏರಿಕೆಯಾಗಿದೆ.
ನವದೆಹಲಿ: ಚಿನ್ನದ ಬೆಲೆಯು 10 ಗ್ರಾಂಗೆ 761 ರೂ. ಏರಿಕೆಯಾಗಿದ್ದು, 48,414 ರೂ.ಗೆ ಬಂದು ನಿಂತಿದೆ.
ಮಂಗಳವಾರ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿದು 76.20 ಕ್ಕೆ ತಲುಪಿದ ಕಾರಣ ಬಂಗಾರದ ಬೆಲೆ ಏರಿಕೆಯಾಗಿದೆ.
ಬೆಳ್ಳಿ ಸಹ ಪ್ರತಿ ಕೆಜಿಗೆ 1,308 ರೂ. ಏರಿಕೆಯಾಗಿದ್ದು, ಪ್ರಸ್ತುತ ಕಿಲೋ ಬೆಳ್ಳಿ 49,204 ರೂ.ಗೆ ಬಂದು ನಿಂತಿದೆ.
"ಯುಎಸ್ ಫೆಡ್ ಬಾಂಡ್ ಖರೀದಿ ಕಾರ್ಯಕ್ರಮವನ್ನು ವಿಸ್ತರಿಸುವುದಾಗಿ ಘೋಷಿಸಿದ ನಂತರ ಮಂಗಳವಾರ ಚಿನ್ನದ ಬೆಲೆಗಳು ಮತ್ತೆ ಏರಿಕೆಯಾಗಿವೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.