ಕರ್ನಾಟಕ

karnataka

ETV Bharat / business

ಒಂದೇ ದಿನ 1,266 ರೂ. ಮುಗ್ಗರಿಸಿದ ಬೆಳ್ಳಿ: ಹಾಗಿದ್ದರೆ ಚಿನ್ನದ ಬೆಲೆ ಏನಾಯಿತು?

ಹಿಂದಿನ ವಹಿವಾಟಿನಲ್ಲಿ ಚಿನ್ನವು 10 ಗ್ರಾಂ.ಗೆ ಗರಿಷ್ಠ 50,632 ರೂ.ಯಲ್ಲಿ ಮಾರಾಟ ಆಗಿತ್ತು. ಇಂದು ಬೆಳ್ಳಿ ಧಾರಣೆಯಲ್ಲಿ ಸಹ 1,266 ರೂ. ಕ್ಷೀಣಿಸಿ ಕೆ.ಜಿ.ಗೆ 60,669 ರೂ.ಗೆ ತಲುಪಿದೆ. ಮಂಗಳವಾರದಂದು ಇದು 61,935 ರೂ.ಯಲ್ಲಿ ಖರೀದಿ ಆಗುತ್ತಿತ್ತು.

gold
ಚಿನ್ನ

By

Published : Nov 4, 2020, 5:01 PM IST

ನವದೆಹಲಿ:ರೂಪಾಯಿ ಮೌಲ್ಯ ಕುಸಿತದ ಮಧ್ಯೆ ಚಿನ್ನದ ಬೆಲೆ ಬುಧವಾರದ ವಹಿವಾಟಿನಂದು 10 ಗ್ರಾಂ. ಮೇಲೆ 111 ರೂ. ಇಳಿಕೆಯಾಗಿ 50,743 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 50,632 ರೂ.ಯಲ್ಲಿ ಮಾರಾಟ ಆಗಿತ್ತು. ಇಂದು ಬೆಳ್ಳಿ ಧಾರಣೆಯಲ್ಲಿ ಸಹ 1,266 ರೂ. ಕ್ಷೀಣಿಸಿ ಕೆ.ಜಿ.ಗೆ 60,669 ರೂ.ಗೆ ತಲುಪಿದೆ. ಮಂಗಳವಾರದಂದು ಇದು 61,935 ರೂ.ಯಲ್ಲಿ ಖರೀದಿ ಆಗುತ್ತಿತ್ತು.

ಬುಧವಾರ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 35 ಪೈಸೆ ಕುಸಿದು 74.76 (ತಾತ್ಕಾಲಿಕ) ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್‌ ಚಿನ್ನವು 1,895 ಡಾಲರ್‌ಗೂ ಕಡಿಮೆ ವಹಿವಾಟಿನಲ್ಲಿ ಸಾಗುತ್ತಿದೆ. ಬೆಳ್ಳಿ ಕೂಡ ದರ ಇಳಿದು ಔನ್ಸ್‌ಗೆ 23.60 ಡಾಲರ್‌ನಷ್ಟಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಅನಿಶ್ಚಿತತೆಯ ಮೇಲೆ ಚಿನ್ನದ ಬೆಲೆಗಳು ಸದೃಢವಾದ ಡಾಲರ್​ ಮಾರಾಟಕ್ಕೆ ಪ್ರಭಾವಿತವಾಗಿವೆ. ಯುಎಸ್ ಚುನಾವಣೆಯ ಅಂತಿಮ ಫಲಿತಾಂಶಕ್ಕೂ ಮುನ್ನ ಊಹಾಪೋಹಗಳು ಬೆಲೆಗಳ ಏರಿಳಿತಕ್ಕೆ ಕಾರಣವಾದವು ಎಂದು ಎಚ್​ಡಿಎಫ್​ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.

ABOUT THE AUTHOR

...view details