ಕರ್ನಾಟಕ

karnataka

ETV Bharat / business

ಕೊರೊನಾ ಪ್ರಕರಣದಂತೆ ಏರುತ್ತಲ್ಲಿದೆ ಚಿನ್ನದ ದರ.. 10 ಗ್ರಾಂ.ಗೆ ಬೆಲೆಯೆಷ್ಟು ಗೊತ್ತಾ? - ಬೆಳ್ಳಿಯ ಬೆಲೆ

ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 423 ರೂ. ಹೆಚ್ಚಳವಾಗಿ 49,352 ರೂ.ಗೆ ಮಾರಾಟವಾಯಿತು. ವಿಶ್ವಾದ್ಯಂತ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಚಿನ್ನ
Gold

By

Published : Jun 24, 2020, 9:02 PM IST

ನವದೆಹಲಿ :ಹೂಡಿಕೆದಾರರಿಗೆ ಸುರಕ್ಷಿತವಾದ ಚಿನ್ನದ ಬೆಲೆಯು ಬುಧವಾರದ ಚಿನಿವಾರ ಪೇಟೆಯಂದು ಏರಿಕೆಯಾಗಿದೆ.

ಜಾಗತಿಕ ಬೆಲೆಗಳ ಜಿಗಿತ ಮತ್ತು ಡಾಲರ್​ ವಿರುದ್ಧ ಭಾರತದ ರೂಪಾಯಿ ಏರಿಕೆಗೆ ವಿರಾಮ ನೀಡಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ.ಗೆ 423 ರೂ. ಹೆಚ್ಚಳವಾಗಿ 49,352 ರೂ.ಗೆ ಮಾರಾಟವಾಯಿತು ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಮಂಗಳವಾರ ಹಳದಿ ಲೋಹವು 10 ಗ್ರಾಂ.ಗೆ 48,929 ರೂ. ಇದ್ದು, ಬುಧವಾರ ರೂಪಾಯಿ ತನ್ನ ಆರಂಭಿಕ ಲಾಭ ಅಳಿಸಿ ಹಾಕಿತು. ತಾತ್ಕಾಲಿಕವಾಗಿ ಯುಎಸ್ ಡಾಲರ್ ವಿರುದ್ಧ 6 ಪೈಸೆಯಷ್ಟು ಕುಸಿತ ಕಂಡು 75.72 ರೂ.ಗೆ ಇಳಿಯಿತು. ಇದು ಕೂಡ ಬಂಗಾರ ದರ ಏರಿಕೆಗೆ ಪುಷ್ಠಿ ನೀಡಿತು.

ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಕೆಜಿಗೆ 49,666 ರೂ.ಗಳಿಂದ 174 ರೂ. ಹೆಚ್ಚಳವಾಗಿ 49,840 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನ 1,770 ಡಾಲರ್‌ನಲ್ಲಿ ವಹಿವಾಟು ನಡೆಸಿತು. ಬೆಳ್ಳಿ ಸಹ ಪ್ರತಿ ಔನ್ಸ್‌ಗೆ 17.87 ಡಾಲರ್​ನಲ್ಲಿತ್ತು.

ವಿಶ್ವಾದ್ಯಂತ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ABOUT THE AUTHOR

...view details