ನವದೆಹಲಿ:ಕೊರೊನಾ ವೈರಸ್ ಭೀತಿಯಿಂದ ರೂಪಾಯಿ ಮೌಲ್ಯದ ಕುಸಿತ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಚಿನ್ನದ ಮೇಲೆ ಹೂಡಿಕೆಯಿಂದಾಗಿ ಚಿನ್ನಾಭರಣದ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.
ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,155 ದರ ಏರಿಕೆಯಾಗಿ 44,383ರಲ್ಲಿ ಮಾರಾಟ ನಡೆಯುತ್ತಿದೆ. ಮಂಗಳವಾರದ ಚಿನಿವಾರ ಪೇಟೆಯಲ್ಲಿ ₹ 43,228 ದರದಲ್ಲಿ ಮಾರಾಟ ಆಗುತ್ತಿತ್ತು.
ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿಯ ದರದಲ್ಲೂ ಕೂಡ ಪ್ರತಿ ಕೆ.ಜಿ. ಮೇಲೆ 1,198 ರೂ. ಹೆಚ್ಚಳವಾಗಿ ₹ 47,729ಯಲ್ಲಿ ಖರೀದಿ ಆಗುತ್ತಿದೆ. ಕಳೆದ ವಹಿವಾಟಿನ ದಿನದಂದು ₹ 46,531 ದರದಲ್ಲಿ ಮಾರಾಟ ನಡೆಯುತ್ತಿತ್ತು.