ಮುಂಬೈ:ಕಳೆದ ಕೆಲ ದಿನಗಳಿಂದದೇಶದಲ್ಲಿ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇವತ್ತೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇದೀಗ 55 ಸಾವಿರ ರೂಪಾಯಿಯ ಸನಿಹಕ್ಕೆ ಬಂದು ತಲುಪಿದೆ.
'ಬಂಗಾರದ ಬೆಲೆ': 55 ಸಾವಿರದ ಸನಿಹ ಬಂದ 10 ಗ್ರಾಂ ಚಿನ್ನದ ರೇಟು - ಬಂಗಾರ
ಅಂತಾರಾಷ್ಟ್ರೀಯ ಪೇಟೆಯಲ್ಲಿ ಚಿನ್ನದ ಧಾರಣೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ಜನರು ಚಿನ್ನದ ಮೇಲೆ ಹೆಚ್ಚು ಆಕರ್ಷಿತರಾಗಿ ಹೂಡಿಕೆ ಮಾಡುತ್ತಿರುವುದೇ ದರ ಏರಿಕೆಗೆ ಕಾರಣವೆನ್ನಲಾಗುತ್ತಿದೆ.
!['ಬಂಗಾರದ ಬೆಲೆ': 55 ಸಾವಿರದ ಸನಿಹ ಬಂದ 10 ಗ್ರಾಂ ಚಿನ್ನದ ರೇಟು Gold price](https://etvbharatimages.akamaized.net/etvbharat/prod-images/768-512-8291697-thumbnail-3x2-wdfdfd.jpg)
Gold price
ಕಳೆದ ಕೆಲ ತಿಂಗಳಲ್ಲಿ 10 ಗ್ರಾಂ ಬಂಗಾರದ ಬೆಲೆ ಬರೋಬ್ಬರಿ 15 ಸಾವಿರ ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 52,065ರೂ. ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 65,410ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಈಗಾಗಲೇ 55 ಸಾವಿರ ರೂಪಾಯಿ ಸಮೀಪಿಸುತ್ತಿದ್ದು, ಇಂದು ಕೂಡ 200 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಇಂದು 800 ರೂಪಾಯಿ ಹೆಚ್ಚಾಗಿದೆ.
Last Updated : Aug 4, 2020, 5:04 PM IST