ನವದೆಹಲಿ: ಸೋಮವಾರದ ಚಿನಿವಾರ ಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಏರಿಕೆ ದಾಖಸಿದ್ದ ಬಂಗಾರ ಧಾರಣೆ ಮಂಗಳವಾರದಂದು ಇಳಿಕೆ ಕಂಡಿದೆ.
ಎಂಸಿಎಕ್ಸ್ ಏಪ್ರಿಲ್ ಗೋಲ್ಡ್ ದರ, ಪ್ರತಿ 10 ಗ್ರಾಂ. ಮೇಲೆ ಶೇ 2.7ರಷ್ಟು ಅಥವಾ ₹ 1,200 ರೂ. ಇಳಿಕೆಯಾಗಿ ₹ 42,371ಕ್ಕೆ ಮಾರಾಟ ಆಗುತ್ತಿದೆ. ಕಳೆದ ಐದು ದಿನಗಳಲ್ಲಿ ಇದುವೇ ಅತ್ಯಂಕ ಕನಿಷ್ಠ ಬೆಲೆಯಾಗಿದೆ.
ಕಳೆದ ಅವಧಿಯ ವಹಿವಾಟಿನಲ್ಲಿ ಚಿನ್ನವು ₹ 3,000ಯಷ್ಟು ಏರಿಕೆ ಸಾರ್ವಕಾಲಿಕ ಗರಿಷ್ಠ ₹ 43,788ಕ್ಕೆ ತಲುಪಿತ್ತು. ಬೆಳ್ಳಿಯ ಧಾರಣೆಯಲ್ಲಿ ಇಂದು ಕ್ಷೀಣಿಸಿದ್ದು, ಪ್ರತಿ 1 ಕೆ.ಜಿ. ಮೇಲೆ ಶೇ 3ರಷ್ಟು ಕುಸಿದು ₹ 48,049 ಮಾರಾಟ ಆಗುತ್ತಿದೆ.
ಕೊರೊನಾ ವೈರಸ್ ಸೋಂಕಿನಿಂದ ಚೀನಾ ಹೊರಗೂ ಮೃತರ ಸಂಖ್ಯೆ ಏರಿಕೆಯಾಗುತ್ತಿದೆ. ಹೂಡಿಕೆದಾರರ ಸುರಕ್ಷತೆಯ ದೃಷ್ಟಿಯಿಂದಾಗಿ ಚಿನ್ನದ ಮೇಲೆ ಹೆಚ್ಚು- ಹೆಚ್ಚು ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಚಿನಿವಾರ ಪೇಟೆಯಲ್ಲಿ ಬಂಗಾರ ಬೆಲೆ, ಕಳೆದ ಏಳು ವರ್ಷಗಳಲ್ಲೇ ಅತ್ಯಧಿಕ ಎತ್ತರಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು.