ಕರ್ನಾಟಕ

karnataka

ETV Bharat / business

ಮೂರು ದಶಕದಲ್ಲಿ ಕನಿಷ್ಠ ಮಟ್ಟಕ್ಕಿಳಿದ ತೈಲ ದರ; ಚಿನ್ನ ಇನ್ನು ಹತ್ತಿರ, ಬೆಳ್ಳಿ ಸರಿಯುತಿದೆ ದೂರ.. - ಬೆಳ್ಳಿ ದರ

ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 516 ಇಳಿಕೆಯಾಗಿ ₹ 44,517ಯಲ್ಲಿ ಮಾರಾಟವಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಪ್ರತಿ ಡಾಲರ್​ ₹ 74.38 ವಹಿವಾಟು ನಡೆಯುತ್ತಿದೆ.

Gold
ಚಿನ್ನ

By

Published : Mar 11, 2020, 5:30 PM IST

ನವದೆಹಲಿ: ತೈಲ ಮತ್ತು ಚಿನ್ನದ ದರ ಏರಿಳಿತವು ಜಾಗತಿಕ ಮಾರುಕಟ್ಟೆಯಲ್ಲಿ ಅಗಾಧವಾದ ಪರಿಣಾಮವನ್ನು ಸೃಷ್ಟಿಸುತ್ತವೆ. ಮಾರುಕಟೆಯ ದಿಕ್ಕು ದೆಸೆಯನ್ನೇ ಬದಲಾಯಿಸುವ ಸಾಮರ್ಥ್ಯ ಪಡೆದ ದ್ರವ ಮತ್ತು ಲೋಹದ ವಸ್ತುಗಳ ಪೈಕಿ ಕಚ್ಚಾ ತೈಲ ದರ ಸೋಮವಾರದಂದು ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಹತ್ತು ಗ್ರಾಂ. ಚಿನ್ನದ ದರದಲ್ಲಿ ₹ 516 ಇಳಿಕೆಯಾಗಿ ₹ 44,517 ಮಾರಾಟ ನಡೆಯುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಏರಿದ್ದು, ಪ್ರತಿ ಡಾಲರ್‌ಗೆ ₹ 74.38 ವಹಿವಾಟು ನಡೆಯುತ್ತಿದೆ. ಇದೂ ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ.

ಸೋಮವಾರದ ವಹಿವಾಟಿನಲ್ಲಿ 10 ಗ್ರಾಂ. ಚಿನ್ನವು ₹ 45,033ಯಲ್ಲಿ ಅಂತ್ಯಗೊಂಡಿತು. ದೆಹಲಿಯಲ್ಲಿ 24 ಕ್ಯಾರೆಟ್​ ಚಿನ್ನದ ದರದಲ್ಲಿ ₹ 516 ಕಡಿತವಾಗಿ ವಹಿವಾಟು ನಡೆಸುತ್ತಿತ್ತು ಎಂದು ಎಚ್​ಡಿಎಫ್​ಸಿ ಸೆಕ್ಯೂರಿಟಿಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್​ ಹೇಳಿದ್ದಾರೆ.

ದೇಶದ ಬೆಳ್ಳಿಯ ಧಾರಣೆಯಲ್ಲೂ ಪ್ರತಿ ಕೆ.ಜಿ. ಮೇಲೆ ₹ 146 ಏರಿಕೆಯಾಗಿ ₹ 47,234ರಲ್ಲಿ ಮಾರಾಟ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,661 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ 17.03 ಡಾಲರ್​ನಲ್ಲಿ ವ್ಯಾಪಾರವಾಗುತ್ತಿದೆ.

ABOUT THE AUTHOR

...view details