ಮುಂಬೈ :ಹೂಡಿಕೆದಾರರ ಸುರಕ್ಷತೆ ಎಂಬ ಹೆಗ್ಗಳಿಕೆ ಪಡೆದ ಬಂಗಾರ ಶುಕ್ರವಾರದ ಚಿನಿವಾರ ಪೇಟೆಯಲ್ಲಿ ದಿಢೀರ್ ಕುಸಿತ ದಾಖಲಿಸಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಹಾಗೂ ಬಂಡವಾಳ ಹೂಡಿಕೆದಾರರು ಬಂಗಾರ ತೊರೆದು ಬದಲಿ ಹೂಡಿಕೆಯತ್ತ ಮುಖಮಾಡಿದ್ದರ ತತ್ಪರಿಣಾಮ ಪ್ರತಿ 10ಗ್ರಾಂ. ಚಿನ್ನದ ದರದಲ್ಲಿ ₹1,097 ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ₹1,097 ಕುಸಿದ ಚಿನ್ನಾಭರಣ, ಟೋಟಲ್ ಹತ್ತು ಗ್ರಾಂ. ಚಿನ್ನ ₹42,697ರಲ್ಲಿ ಮಾರಾಟವಾಗುತ್ತಿದೆ. ಈ ಹಿಂದಿನ ಸೆಷನ್ನಲ್ಲಿ ₹43,697ರಲ್ಲಿ ಮಾರಾಟವಾಗಿತ್ತು. ಬಂಗಾರದ ನಡೆ ಅನುಸರಿಸಿದ ಬೆಳ್ಳಿಯೂ ಸಹ ಪ್ರತಿ ಕೆಜಿ ಮೇಲೆ ₹1,574 ಇಳಿಕೆಯಾಗಿ ₹44,130ರಲ್ಲಿ ಮಾರಾಟವಾಗುತ್ತಿದೆ. ಗುರುವಾರದ ವಹಿವಾಟಿನಲ್ಲಿ ಇದು ₹45,704ರಲ್ಲಿ ಮಾರಾಟ ಆಗಿತ್ತು.
ಕಳೆದ ವಾರದಿಂದ ಡಾಲರ್ ಎದುರು ಮೌಲ್ಯ ಕಳೆದುಕೊಳ್ಳುತ್ತಿದ್ದ ಭಾರತೀಯ ಕರೆನ್ಸಿ (ರೂಪಾಯಿ) ಇಂದು ಚೇತರಿಸಿಕೊಂಡಿದೆ. ಮಧ್ಯಾಹ್ನದ ಬಳಿಕ ಡಾಲರ್ ವಿರುದ್ಧ ರೂಪಾಯಿ 36 ಪೈಸೆಯಷ್ಟು ಸುಧಾರಿಸಿಕೊಂಡಿತು.