ನವದೆಹಲಿ:ಕಳೆದ ಕೆಲ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಸತತ ಇಳಿಕೆ ಕಂಡು ಬರುತ್ತಿದ್ದು, ಇದರಿಂದ ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ ಸಿಕ್ಕಿದೆ. ಇಂದಿನ ಪೇಟೆದಾರಣೆ ಪ್ರಕಾರ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂ. ಚಿನ್ನಕ್ಕೆ 317ರೂಪಾಯಿ ಕುಸಿತಗೊಂಡಿದೆ.
ಚಿನ್ನ ಖರೀದಿ ಮಾಡುವವರಿಗೆ ಇದು ಸುವರ್ಣ ಕಾಲವಾಗಿದ್ದು, ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಅಗ್ಗವಾಗುತ್ತಿದೆ. ಸದ್ಯ 10 ಗ್ರಾಂ ಚಿನ್ನಕ್ಕೆ 45,391 ರೂ. ಆಗಿದೆ. ಇದರ ಜೊತೆಗೆ ಬೆಳ್ಳಿಯಲ್ಲೂ ದಾಖಲೆಯ ಇಳಿಕೆ ಕಂಡು ಬಂದಿದ್ದು, ಪ್ರತಿ ಕೆಜಿಗೆ 1,128 ದಷ್ಟು ಕಡಿಮೆಯಾಗಿದೆ. ಸದ್ಯ ಬೆಳ್ಳಿ ಪ್ರತಿ ಕೆಜಿಗೆ 62,572 ಆಗಿದೆ. ಈ ಮೊದಲು ಬೆಳ್ಳಿ ಮೌಲ್ಯ 63,700 ರೂ. ಆಗಿತು. ಕಳೆದ ನಾಲ್ಕು ತಿಂಗಳಿಗೆ ಹೋಲಿಕೆ ಮಾಡಿದಾಗ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಗ್ರಾಹಕರು ಹೆಚ್ಚಿನ ಚಿನ್ನಾಭರಣ ಖರೀದಿಗೆ ಇದೀಗ ಮುಂದಾಗುತ್ತಿದ್ದಾರೆ.