ಕರ್ನಾಟಕ

karnataka

ETV Bharat / business

Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; 10 ಗ್ರಾಂ ಚಿನ್ನದ ಮೇಲೆ ಭಾರಿ ಇಳಿಕೆ - ಬೆಳ್ಳಿ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿಂದು ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಮೇಲೆ 312 ರೂ. ಕುಸಿತದೊಂದಿಗೆ 46,907 ರೂ. ಹಾಗೂ ಬೆಳ್ಳಿ ಕೆಜಿಗೆ 1,037 ರೂ. ಕುಸಿತದೊಂದಿಗೆ 66,128 ರೂಪಾಯಿಗೆ ಇಳಿದಿದೆ.

Gold price on August 5: Yellow metal tumbles Rs 312, silver plunges Rs 1,037
Gold Price: ಚಿನ್ನಾಭರಣ ಕೊಳ್ಳುವವರಿಗೆ ಗುಡ್‌ ನ್ಯೂಸ್‌; 10 ಗ್ರಾಂ ಚಿನ್ನದ ಮೇಲೆ 315 ರೂ.ಇಳಿಕೆ

By

Published : Aug 5, 2021, 6:04 PM IST

ನವ ದೆಹಲಿ: ಚಿನ್ನಾಭರಣ ಪ್ರಿಯರಿಗೆ ಚಿನಿವಾರ ಪೇಟೆ ಸಿಹಿ ಸುದ್ದಿ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಇಂದು 10 ಗ್ರಾಂ ಚಿನ್ನದ ಮೇಲೆ 312 ರೂಪಾಯಿ ಕಡಿಮೆಯಾಗಿದೆ. ಪ್ರಸ್ತುತ 10 ಗ್ರಾಂಗೆ 46,907 ರೂಪಾಯಿ ಇದೆ.

ಹಿಂದಿನ ವಹಿವಾಟಿನಲ್ಲಿ ಚಿನ್ನ 10 ಗ್ರಾಂಗೆ 47,219 ರೂಪಾಯಿ ಇತ್ತು. ಪ್ರತಿ ಕೆಜಿಗೆ ಬೆಳ್ಳಿ ಬೆಲೆಯಲ್ಲಿ ರೂ. 1,037 ಕುಸಿತದೊಂದಿಗೆ 66,128 ರೂಪಾಯಿಗೆ ಇಳಿದಿದೆ. ಬುಧವಾರ 67,165 ರೂಪಾಯಿಗಳ ಮಾರುಕಟ್ಟೆ ದರವಿತ್ತು.

ಇದನ್ನೂ ಓದಿ: Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌.. ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಚಿನ್ನವು 1,810 ಡಾಲರ್‌ಗಳಷ್ಟು ಕಡಿಮೆಯಾಗಿದೆ. ಬೆಳ್ಳಿ ಪ್ರತಿ ಔನ್ಸ್‌ಗೆ 25.37 ಡಾಲರ್‌ಗಳಷ್ಟು ಕುಸಿತವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತದ ವಹಿವಾಟು ನಡೆಸಿದ ಕಾರಣ ಭಾರತದಲ್ಲೂ ಚಿನ್ನದ ಬೆಲೆ ತಗ್ಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ತಿಳಿಸಿದ್ದಾರೆ.

ABOUT THE AUTHOR

...view details