ಕರ್ನಾಟಕ

karnataka

'ಚಿನ್ನ' ಪ್ರಿಯರಿಗೆ ಮತ್ತಷ್ಟು ಭಾರವಾಯ್ತು 'ಬಂಗಾರ'... ರಾಜ್ಯದಲ್ಲಿ ಬೆಲೆ ಎಷ್ಟು ಗೊತ್ತಾ?

ಬುಲಿಯನ್​ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯ 1,430 ಡಾಲರ್​ಗಿಂತಲೂ ಅಧಿಕವಾಗಿದೆ. ಆರ್ಥಿಕ ಬೆಳವಣಿಗೆಯ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆದಾರರು ಚಿನ್ನದ ಮೇಲೆ ಆಕರ್ಷಿತರಾಗಿದ್ದಾರೆ. ಯಥೇಚ್ಛ ಬಂಗಾರ ಖರೀದಿಯಿಂದಾಗಿ ಅಮೆರಿಕದ 10 ವರ್ಷ ವಾಯ್ದೆಯ ಬಾಂಡ್​ ದರ ಎರಡು ವರ್ಷಗಳ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

By

Published : Jul 3, 2019, 5:50 PM IST

Published : Jul 3, 2019, 5:50 PM IST

ಸಾಂದರ್ಭಿಕ ಚಿತ್ರ

ಮುಂಬೈ:ಬಲಾಢ್ಯ ಜಾಗತಿಕ ಮಾರುಕಟ್ಟೆಯ ಏರಿಳಿತ, ಹಣದ ಸುರಕ್ಷತೆಗಾಗಿ ಹಳದಿ ಲೋಹದ ಮೇಲೆ ಹೂಡಿಕೆ ಹಾಗೂ ಸ್ಥಳೀಯ ಜುವೆಲ್ಲರಿ ಪೇಟೆಯಲ್ಲಿನ ಬೇಡಿಕೆಯಿಂದ ಚಿನ್ನದ ದರ ಏರಿಕೆಯಾಗಿದೆ.

ಜಾಗತಿಕ ಪೇಟೆಯಲ್ಲಿ ಔನ್ಸ್​ ಚಿನ್ನವು 1,425.95 ಡಾಲರ್​ನಲ್ಲಿ ಹಾಗೂ ಬೆಳ್ಳಿ 15.31 ಡಾಲರ್​ನಲ್ಲಿ ವಹಿವಾಟು ನಡೆಸಿತ್ತು. ದೇಶಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ. ಚಿನ್ನಕ್ಕೆ ₹ 260 ಏರಿಕೆಯಾಗಿ ₹ 34,380ರಲ್ಲಿ ಮಾರಾಟವಾಗುತ್ತಿದೆ. ಕೆ.ಜಿ. ಬೆಳ್ಳಿ ಮೇಲೂ ಕೂಡ ₹ 150 ಹೆಚ್ಚಳವಾಗಿದ್ದು, ಗ್ರಾಹಕರು ₹ 36,650 ನೀಡಿ ಖರೀದಿಸುತ್ತಿದ್ದಾರೆ.

ಬುಲಿಯನ್​ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯ 1,430 ಡಾಲರ್​ಗಿಂತಲೂ ಅಧಿಕವಾಗಿದೆ. ಆರ್ಥಿಕ ಬೆಳವಣಿಗೆಯ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆದಾರರು ಚಿನ್ನದ ಮೇಲೆ ಆಕರ್ಷಿತರಾಗಿದ್ದಾರೆ. ಯಥೇಚ್ಛ ಬಂಗಾರ ಖರೀದಿಯಿಂದಾಗಿ ಅಮೆರಿಕದ 10 ವರ್ಷ ವಾಯ್ದೆಯ ಬಾಂಡ್​ ದರ ಎರಡು ವರ್ಷಗಳ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ 99.9 ಮತ್ತು ಶೇ. 99.5 ಪರಿಶುದ್ಧತೆ 10 ಗ್ರಾಂ. ಚಿನ್ನದ ಮೇಲೆ ತಲಾ ₹ 260 ಏರಿಕೆ ಕಂಡಿದೆ. ಪ್ರತಿಯಾಗಿ ಒಟ್ಟು ₹ 34,380 ಮತ್ತು ₹ 34,210ರಲ್ಲಿ ಖರೀದಿ ಆಗುತ್ತಿದೆ.

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ, ಚಿನ್ನವು ₹ 32,520 ಹಾಗೂ 24 ಕ್ಯಾರೆಟ್​ನ 10 ಗ್ರಾಂ. ಚಿನ್ನ ₹ 34,300 ಮಾರಾಟ ಆಗುತ್ತಿದೆ. ರಾಜ್ಯದ ಆಯಾ ಜಿಲ್ಲೆಗಳ ಧಾರಣೆಯಲ್ಲೂ ಏರಿಳಿತವಾಗಿದೆ.

For All Latest Updates

TAGGED:

ABOUT THE AUTHOR

...view details