ಕರ್ನಾಟಕ

karnataka

ETV Bharat / business

ಸತತ 6ನೇ ವಹಿವಾಟಿನಲ್ಲೂ ಬೆಲೆ ಇಳಿಕೆ: ಸಾರ್ವಕಾಲಿಕ ಏರಿಕೆ ಬಳಿಕ 6,700 ರೂ. ಕುಸಿದ ಚಿನ್ನ

ಸಾಗರೋತ್ತರ ಸರಕು ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಶುಕ್ರವಾರದ ಮುಕ್ತಾಯದಂದು ಇಳಿಕೆ ಕಂಡಿದ್ದವು. ಅಮೆರಿಕದಲ್ಲಿ ಆರ್ಥಿಕ ಉತ್ತೇಜನಗಳ ನಿರೀಕ್ಷೆಗಳು ಸಕಾರಾತ್ಮಕ ಭಾವನೆಗಳನ್ನು ಕಳೆದುಕೊಂಡಿದ್ದರಿಂದ ಕುಸಿತ ಸಂಭವಿಸಿತ್ತು. ಮತ್ತೊಂದೆಡೆ ಕೊರೊನಾ ವೈರಸ್ ಪರಿಹಾರ ಪ್ಯಾಕೇಜ್ ಮಾತುಕತೆಯು ಮುಂದುವರೆದಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಷೇರುಗಳ ಮೌಲ್ಯ ಏರಿಕೆಯಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.

Gold
ಚಿನ್ನ

By

Published : Sep 28, 2020, 6:48 PM IST

ಮುಂಬೈ: ದೇಶೀಯ ಸರಕು ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸತತ 6ನೇ ವಹಿವಾಟಿನಲ್ಲಿಯೂ ಇಳಿಮುಖವಾಗಿವೆ.

ಸಾಗರೋತ್ತರ ಸರಕು ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಶುಕ್ರವಾರದ ಮುಕ್ತಾಯದಂದು ಇಳಿಕೆ ಕಂಡಿದ್ದವು. ಅಮೆರಿಕದಲ್ಲಿ ಆರ್ಥಿಕ ಉತ್ತೇಜನಗಳ ನಿರೀಕ್ಷೆಗಳು ಸಕಾರಾತ್ಮಕ ಭಾವನೆಗಳನ್ನು ಕಳೆದುಕೊಂಡಿದ್ದರಿಂದ ಕುಸಿತ ಸಂಭವಿಸಿತ್ತು.

ಮತ್ತೊಂದೆಡೆ ಕೊರೊನಾ ವೈರಸ್ ಪರಿಹಾರ ಪ್ಯಾಕೇಜ್ ಮಾತುಕತೆಯು ಮುಂದುವರೆದಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಷೇರುಗಳ ಮೌಲ್ಯ ಏರಿಕೆಯಾಗಿ ಚಿನ್ನ ಕುಸಿಯಿತು.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ಗೋಲ್ಡ್ ಅಕ್ಟೋಬರ್ ಫ್ಯೂಚರ್ಸ್ 149 ರೂ.ಗಳಷ್ಟು ಕುಸಿದಿದ್ದು, ಇಂಟ್ರಾಡೇ ಕನಿಷ್ಠ 49,460 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಂ.ಗೆ 49,650 ರೂ.ದಷ್ಟಿತ್ತು.

ಈ ವರ್ಷದ ಆರಂಭದಿಂದ ಹಳದಿ ಲೋಹವು ಶೇ 41.5ರಷ್ಟು ಏರಿಕೆಯಾಗಿದ್ದು, 10 ಗ್ರಾಂ.ಗೆ ಸಾರ್ವಕಾಲಿಕ ಗರಿಷ್ಠ 56,191 ರೂ.ಗೆ ಏರಿಕೆ ಆಗಿತ್ತು. ಕಳೆದ ಆಗಸ್ಟ್ 7ರಂದು ತನ್ನ ಜೀವಿತಾವಧಿಯ ಗರಿಷ್ಠ ದರಕ್ಕಿಂತ 6,700 ರೂ.ಯಷ್ಟು ತಗ್ಗಿದೆ.

ಬೆಳ್ಳಿ ದರ ಸೆಪ್ಟೆಂಬರ್ ಫ್ಯೂಚರ್ಸ್ ಪ್ರತಿ ಕೆ.ಜಿ.ಗೆ 59,320 ರೂ. ತಲುಪಿದ ಬಳಿಕ 472 ರೂ.ಯಷ್ಟು ಕುಸಿದಿದೆ. ಆಗಸ್ಟ್ 7 ರಂದು ಸಾರ್ವಕಾಲಿಕ ಗರಿಷ್ಠ 77,949 ರೂ.ನಷ್ಟಿತ್ತು.

ABOUT THE AUTHOR

...view details