ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ 10 ಗ್ರಾಂ. ಚಿನ್ನದ ಬೆಲೆ ಮೇಲೆ 441 ರೂ. ಹೆಚ್ಚಳವಾಗಿ 48,530 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 48,089 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇಂದು 441 ರೂ. ಏರಿಕೆಯಾಗಿ 48,530 ರೂ.ಗೆ ತಲುಪಿದೆ. ಬೆಳ್ಳಿ ಸಹ ಪ್ರತಿ ಕೆ.ಜಿ. ಮೇಲೆ 1,148 ರೂ. ಹೆಚ್ಚಳವಾಗಿ ನಿನ್ನೆ 70,284 ರೂ.ಗೆ ಮಾರಾಟ ಆಗುತ್ತಿದದ್ದು ಇಂದು 71,432 ರೂ.ಗೆ ಏರಿದೆ.
ಓದಿ: ನಾಟೌಟ್ ಸೆಂಚುರಿ ಬಳಿಕವೂ ಮತ್ತೆ ಪೆಟ್ರೋಲ್ ರೇಟ್ ಏರಿಕೆ: ದೇಶಾದ್ಯಂತ ಇಂಧನ ಬೆಲೆ ಹೀಗಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,896 ಡಾಲರ್‌ಗೆ ಸ್ವಲ್ಪ ಕಡಿಮೆ ಮತ್ತು ಬೆಳ್ಳಿ ಔನ್ಸ್‌ಗೆ 28.15 ಡಾಲರ್‌ಗೆ ಸಮತಟ್ಟಾಗಿದೆ.
ಕಾಮೆಕ್ಸ್ (ನ್ಯೂಯಾರ್ಕ್ ಮೂಲದ ಸರಕು ವಿನಿಮಯ) ವಹಿವಾಟಿನಲ್ಲಿ ಚಿನ್ನದ ಬೆಲೆಗಳು ಸ್ವಲ್ಪಮಟ್ಟಿಗೆ ಕುಸಿದಿದ್ದು, ಪ್ರತಿ ಔನ್ಸ್‌ಗೆ 1,896 ಡಾಲರ್ ವಹಿವಾಟು ನಡೆಸಿದೆ ಎಂದು ಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.