ಕರ್ನಾಟಕ

karnataka

ETV Bharat / business

3,717 ರೂ. ಏರಿಕೆಯಾದ ಬೆಳ್ಳಿ: ಬಂಗಾರದ ದರವೆಷ್ಟು?

ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂಗೆ 50,544 ರೂ.ಯಲ್ಲಿ ಮಾರಾಟ ಆಗಿತ್ತು. ಇಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 59,077 ರೂ.ಗಳಿಂದ 1,623 ರೂ. ಗಳಿಕೆ ಕಂಡು 60,700 ರೂ.ಗೆ ಮಾರಾಟ ಆಗುತ್ತಿದೆ. ಕಳೆದ ನಾಲ್ಕು ದಿನಗಳ ವಹಿವಾಟಿನ ಅವಧಿಯಲ್ಲಿ ಬೆಳ್ಳಿಯ ದರದಲ್ಲಿ 3,717 ರೂ.ಯಷ್ಟು ಏರಿಕೆ ಆಗಿದೆ.

Gold
ಚಿನ್ನ

By

Published : Oct 30, 2020, 5:39 PM IST

ನವದೆಹಲಿ:ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೂಲ್ಯ ಲೋಹದ ಬೆಲೆಗಳು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು 10 ಗ್ರಾಂ.ಗೆ 268 ರೂ.ಯಷ್ಟು ಹೆಚ್ಚಳವಾಗಿ 50,812 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂಗೆ 50,544 ರೂ.ಯಲ್ಲಿ ಮಾರಾಟ ಆಗಿತ್ತು. ಇಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 59,077 ರೂ.ಗಳಿಂದ 1,623 ರೂ. ಗಳಿಕೆ ಕಂಡು 60,700 ರೂ.ಗೆ ಮಾರಾಟ ಆಗುತ್ತಿದೆ. ಕಳೆದ ನಾಲ್ಕು ದಿನಗಳ ವಹಿವಾಟಿನ ಅವಧಿಯಲ್ಲಿ ಬೆಳ್ಳಿಯ ದರದಲ್ಲಿ 3,717 ರೂ.ಯಷ್ಟು ಏರಿಕೆ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,873 ಡಾಲರ್‌ಗಳಷ್ಟು ಮತ್ತು ಬೆಳ್ಳಿ ಔನ್ಸ್‌ಗೆ 23.32 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ.

ಡಾಲರ್ ಕುಸಿತ ಮತ್ತು ಅಮೆರಿಕದ ಪ್ರಚೋದಕ ಪ್ಯಾಕೇಜ್​ನ ವಿಳಂಬದ ಮೇಲೆ ಚಿನ್ನದ ಬೆಲೆಗಳು ವಹಿವಾಟು ನಡೆಸುತ್ತವೆ ಎಂದು ಎಚ್​ಡಿಎಫ್​ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.

ABOUT THE AUTHOR

...view details