ಕರ್ನಾಟಕ

karnataka

ETV Bharat / business

ಏರಿಕೆಯತ್ತ ಮುಖ ಮಾಡಿದ ಚಿನ್ನ - ಬೆಳ್ಳಿ: 170 ರೂ. ತುಟ್ಟಿಯಾದ ಬಂಗಾರ - ಡಾಲರ್​ ಎದುರು ರೂಪಾಯಿ ಮೌಲ್ಯ

ಆಭರಣ ಪ್ರೀಯರಿಗೆ ಮತ್ತೊಮ್ಮೆ ಶಾಕಿಂಗ್​ ನ್ಯೂಸ್​ ಎದುರಾಗಿದ್ದು, ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದೆ.

Gold rate
Gold rate

By

Published : Aug 24, 2021, 5:14 PM IST

ನವದೆಹಲಿ: ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡು ಬಂದಿದ್ದು, 10 ಗ್ರಾಂ ಬಂಗಾರದ ಬೆಲೆಯಲ್ಲಿ ಇಂದು ಕೂಡ 170 ರೂ ಏರಿಕೆಯಾಗಿದೆ. ಈ ಮೂಲಕ ಇದೀಗ 10 ಗ್ರಾಂ ಆಭರಣ ಚಿನ್ನದ ಬೆಲೆ 46,544 ರೂಪಾಯಿ ಆಗಿದೆ.

ಬೆಳ್ಳಿಯ ಬೆಲೆಯಲ್ಲೂ ಪ್ರತಿ ಕೆಜಿಗೆ 172 ರೂಪಾಯಿ ಏರಿಕೆಯಾಗಿದ್ದು, ಇದೀಗ ಕೆಜಿ ಬೆಳ್ಳಿ 61,584 ರೂಪಾಯಿ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​ ಚಿನ್ನ USD 1,801 ಆಗಿದ್ದು, ಬೆಳ್ಳಿ ಪ್ರತಿ ಔನ್ಸ್​ಗೆ USD 23.60 ಆಗಿದೆ. ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ 10 ಗ್ರಾಂಗೆ 44 ಸಾವಿರಕ್ಕೂ ಕೆಳ ಮಟ್ಟದಲ್ಲಿ ಮಾರಾಟವಾಗಿತ್ತು. ಆದರೆ, ಇದೀಗ ಮತ್ತೊಮ್ಮೆ 46 ಸಾವಿರ ರೂ. ಗಡಿ ದಾಟಿದೆ.

ಇದನ್ನೂ ಓದಿರಿ: ಪ್ರೀತಿಸಿ, ಮನೆಯಿಂದ ಓಡಿ ಹೋಗ್ತಿದ್ದ ಅಪ್ರಾಪ್ತ ಜೋಡಿಗೆ ಬಲವಂತದ ಮದುವೆ

ಡಾಲರ್​ ಎದುರು ಏರಿಕೆ ಕಂಡ ರೂಪಾಯಿ

ಇಂದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ಬೆಲೆಯಲ್ಲಿ 9 ಪೈಸೆ ಏರಿಕೆ ಕಂಡು ಬಂದಿದ್ದು, ಸದ್ಯ ಡಾಲರ್​ಗೆ 74.13 ಪೈಸೆ ವಹಿವಾಟು ನಡೆಸಿದೆ.

ಬೆಂಗಳೂರರಲ್ಲಿ ಇಂತಿದೆ ಚಿನ್ನದ ದರ

ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ 45800 ರೂ ಆದರೆ, 48090 ರೂ ಇದೆ

ABOUT THE AUTHOR

...view details