ಕರ್ನಾಟಕ

karnataka

ETV Bharat / business

ಚಿನ್ನದ ದರದಲ್ಲಿ 1,182 ರೂ. ಏರಿಕೆ, 72,542 ರೂ. ತಲುಪಿದ ಬೆಳ್ಳಿ: ಹೀಗಿದೆ ಬೆಲೆ ಏರಿಕೆಗೆ ಕಾರಣ

10 ಗ್ರಾಂ. ಚಿನ್ನದ ಮೇಲೆ 1,182 ರೂ. ಏರಿಕೆಯಾಗಿ 54,856 ರೂ. ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

Gold
ಚಿನ್ನ

By

Published : Aug 18, 2020, 5:36 PM IST

ನವದೆಹಲಿ: ಅಂತಾರಾಷ್ಟ್ರೀಯ ಪ್ರವೃತ್ತಿ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಗಳು ಮಂಗಳವಾರ ಏರಿಕೆ ದಾಖಲಿಸಿದೆ.

10 ಗ್ರಾಂ. ಚಿನ್ನದ ಮೇಲೆ 1,182 ರೂ. ಏರಿಕೆಯಾಗಿ 54,856 ರೂ. ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 53,674 ರೂ.ಯಲ್ಲಿ ವಹಿವಾಟು ನಡೆಸಿತ್ತು. ಬೆಳ್ಳಿ ಖರೀದಿ ಸಹ ಹೆಚ್ಚಳವಾಗಿದ್ದು, ಕೆ.ಜಿ. ಮೇಲೆ 1,587 ರೂ. ಏರಿಕೆಯಾಗಿ 72,542 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ 70,960 ರೂ.ಗಳಷ್ಟಿತ್ತು.

ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆಗಳು ಅಂತಾರಾಷ್ಟ್ರೀಯ ಚಿನ್ನದ ಬೆಲೆಯೊಂದಿಗೆ 1,182 ರೂ.ಯಷ್ಟು ಏರಿಕೆಯಾಗಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್​ ಚಿನ್ನವು 2,005 ಡಾಲರ್‌ಗೆ ಏರಿದರೆ, ಬೆಳ್ಳಿ ಔನ್ಸ್‌ಗೆ 28.15 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯ ಅನಿಶ್ಚಿತತೆಯಲ್ಲಿ ಚಿನ್ನದ ಬೆಲೆಗಳು ಮಂಗಳವಾರದಂದು ಹೆಚ್ಚಿನ ವಹಿವಾಟು ನಡೆಸಿದವು. ಅಂತಾರಾಷ್ಟ್ರೀಯ ಸ್ಪಾಟ್​​ ಚಿನ್ನ 2 ಸಾವಿರ್​ ಡಾಲರ್ ಗಡಿ ದಾಟಿದ್ದು ಸಹ ದೇಶಿ ಪೇಟೆಯಲ್ಲಿ ಚಿನ್ನದ ದರ ಏರಿಕೆಗೆ ಕಾರಣವಾಯಿತು ಎಂದರು.

ABOUT THE AUTHOR

...view details