ನವದೆಹಲಿ:ಕೋವಿಡ್ -19 ಸಾಂಕ್ರಾಮಿಕ ರೋಗ ಬೇಡಿಕೆಯ ಕುಸಿತದ ನಡುವೆ ಚಾಲ್ತಿ ಖಾತೆ ಕೊರತೆಯ (ಸಿಎಡಿ) ಮೇಲೆ ಪ್ರಭಾವ ಬೀರುವ ಚಿನ್ನದ ಆಮದು ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 57ರಷ್ಟು ಇಳಿಕೆಯಾಗಿ 6.8 ಬಿಲಿಯನ್ ಡಾಲರ್‌ಗೆ (ಸುಮಾರು 50,658 ಕೋಟಿ ರೂ.) ತಲುಪಿದೆ ಎಂದ ವಾಣಿಜ್ಯ ಸಚಿವಾಲಯ ಹೇಳಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್ ಡಾಲರ್ (ಸುಮಾರು 1,10,259 ಕೋಟಿ ರೂ.) ಮೌಲ್ಯದಷ್ಟಿತ್ತು. 2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಬೆಳ್ಳಿ ಆಮದು ಶೇ 63.4ರಷ್ಟು ಇಳಿದು 733.57 ಮಿಲಿಯನ್ ಡಾಲರ್‌ಗೆ (ಸುಮಾರು 5,543 ಕೋಟಿ ರೂ.) ಇದೆ ಎಂದು ಅಂಕಿ - ಅಂಶಗಳು ತೋರಿಸಿವೆ.