ಕರ್ನಾಟಕ

karnataka

ETV Bharat / business

ಮೈ ಕೊಡವಿ ದಾಖಲೆ ಮಟ್ಟಕ್ಕೆ ಜಿಗಿದ ಚಿನ್ನ: ಏನಿದರ ಲೆಕ್ಕಾಚಾರ? - ಇಂದಿನ ಚಿನ್ನದ ದರ

ಕೊರೊನಾ ವೈರಸ್ ಸೋಂಕು ಪ್ರಮಾಣ ಜಾಗತಿಕ ಆರ್ಥಿಕ ಚೇತರಿಕೆಯ ವಿಳಂಬದ ಬಗ್ಗೆ ಕಳವಳ ಹೆಚ್ಚಿಸಿದೆ. ಇದರಿಂದ ಚಿನ್ನದ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ತಿಂಗಳ ಗರಿಷ್ಠ ಮಟ್ಟ ಮುಟ್ಟಿದವು. ಹೂಡಿಕೆದಾರರ ಸುರಕ್ಷಿತ ಧಾಮ ಎಂಬುದು ಮತ್ತೆ ಸಾಬೀತಾಗಿದೆ.

Gold
ಚಿನ್ನ

By

Published : Jun 22, 2020, 3:35 PM IST

ಹೈದರಾಬಾದ್: ಚಿನಿವಾರ ಪೇಟೆಯಲ್ಲಿ ಸೋಮವಾರ ಬಂಗಾರ ದರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಎಂಸಿಎಕ್ಸ್​ನಲ್ಲಿ ಆಗಸ್ಟ್ ಫ್ಯೂಚರ್​ ಚಿನ್ನವು ಆರಂಭಿಕ ವಹಿವಾಟಿನಲ್ಲಿ 10 ಗ್ರಾಂ.ಗೆ ₹ 333 ಅಥವಾ ಶೇ 0.7ರಷ್ಟು ಏರಿಕೆಯಾಗಿ ₹ 48,289 ಕ್ಕೆ ತಲುಪಿದೆ. ಬೆಳ್ಳಿಯ ಫ್ಯೂಚರ್​ ದರವು ₹ 554 ಅಥವಾ ಶೇ 1.2ರಷ್ಟು ಏರಿಕೆಯಾಗಿದ್ದು, ಪ್ರತಿ ಕೆಜಿ ₹ 49,190 ಯಲ್ಲಿ ಮಾರಾಟ ಆಗುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 20 ರೂ. ಹೆಚ್ಚಳವಾಗಿ 46,780 ರೂ.ಗೆ ಏರಿದೆ. 24 ಕ್ಯಾರೆಟ್ ಚಿನ್ನದ ದರದ ಮೇಲೆ 10 ಗ್ರಾಂ.ಗೆ 10 ರೂ. ಏರಿಕೆಯಾಗಿ 47,970 ರೂ.ಯಲ್ಲಿ ಖರೀದಿ ಆಗುತ್ತಿದೆ.

ಕೊರೊನಾ ವೈರಸ್ ಸೋಂಕು ಪ್ರಮಾಣ ಜಾಗತಿಕ ಆರ್ಥಿಕ ಚೇತರಿಕೆಯ ವಿಳಂಬದ ಬಗ್ಗೆ ಕಳವಳ ಹೆಚ್ಚಿಸಿದೆ. ಇದರಿಂದ ಚಿನ್ನದ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ತಿಂಗಳ ಗರಿಷ್ಠ ಮಟ್ಟ ಮುಟ್ಟಿದವು. ಹೂಡಿಕೆದಾರರ ಸುರಕ್ಷಿತ ಧಾಮ ಎಂಬುದನ್ನು ಈ ದರ ಏರಿಕೆ ಮತ್ತೆ ಅರ್ಥೈಸಿದೆ.

ಸ್ಪಾಟ್ ಚಿನ್ನವು ಶೇ 0.7ರಷ್ಟು ಏರಿಕೆಯಾಗಿ 1,754.74 ಡಾಲರ್‌ಗೆ ತಲುಪಿದೆ. ಇದು ಮೇ 18ರ ಬಳಿಕ ಅತ್ಯಧಿಕ ಏರಿಕೆಯಾಗಿದೆ.

ಭಾರತದಲ್ಲಿ ಚಿನ್ನದ ಬೆಲೆಗಳು ಜಾಗತಿಕ ದರ ಮತ್ತು ರೂಪಾಯಿ - ಯುಎಸ್ ಡಾಲರ್ ವಿನಿಮಯ ದರದಿಂದ ಪ್ರಭಾವಿತವಾಗಿದೆ. ಜಾಗತಿಕ ಚಿನ್ನದ ಬೆಲೆಗಳು ಈ ವರ್ಷ ಸುಮಾರು ಶೇ 15ರಷ್ಟು ಹೆಚ್ಚಾಗಿದೆ. ಹಳದಿ ಲೋಹದ ಬೆಲೆ ಏರಿಕೆಯು ಭಾರತದಲ್ಲಿ ಚಿನ್ನದ ಚಿಲ್ಲರೆ ಬೇಡಿಕೆ ತಗ್ಗಿಸಿದೆ.

ABOUT THE AUTHOR

...view details