ಕರ್ನಾಟಕ

karnataka

ETV Bharat / business

60 ಸಾವಿರ ರೂ. ಗಡಿ ದಾಟಿದ ಬೆಳ್ಳಿ: ಚಿನ್ನದ ರೇಟ್​ ಕೇಳಿದ್ರೆ ಆಭರಣ ಪ್ರಿಯರು ತತ್ತರ..! - Today Gold Rate

ಇಂಡಿಯನ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳಿಯ ಧಾರಣೆ ಈ ಹಿಂದಿನ ಗರಿಷ್ಠ ಏರಿಕೆ 59,974 ರೂ. 2013ರ ಜನವರಿ 23 ರಂದು ದಾಖಲಿಸಿತ್ತು. ಬುಧವಾರದ ಪೇಟೆಯಲ್ಲಿ ಆ ದಾಖಲೆಯನ್ನು ಅಳಿಸಿಹಾಕಿದೆ.

Gold
ಚಿನ್ನ

By

Published : Jul 22, 2020, 2:50 PM IST

ಮುಂಬೈ: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್ಥಿಕ ಅನಿಶ್ಚಿತತೆ ಮುಂದುವರಿಯುತ್ತಿದೆ. ಬಹು - ಸರಕು ವಿನಿಮಯ ಕೇಂದ್ರದಲ್ಲಿ (ಎಂಸಿಎಕ್ಸ್) ಚಿನ್ನದ ಫ್ಯೂಚರ್​ ದರವು ಬುಧವಾರ ಹೊಸ ಗರಿಷ್ಠ ಮಟ್ಟ ತಲುಪಿದೆ.

ಮಂಗಳವಾರದ ಎಂಸಿಎಕ್ಸ್‌ನಲ್ಲಿ ಆಗಸ್ಟ್‌ನ ಚಿನ್ನದ ಬೆಲೆಯಲ್ಲಿ 10 ಗ್ರಾಂ. 49,996 ರೂ.ಗೆ ಏರಿತ್ತು. ಇಂದು ಪ್ರತಿ 10 ಗ್ರಾಂ. ಚಿನ್ನವು 50,000 ರೂ. ಗಡಿ ದಾಟಿದೆ. ಅಂತೆಯೇ ಬೆಳ್ಳಿ ಕೂಡ ಪ್ರತಿ ಕೆ.ಜಿ.ಗೆ 60,000 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.

ಇಂಡಿಯನ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳಿಯ ಧಾರಣೆಯ ಈ ಹಿಂದಿನ ಗರಿಷ್ಠ ಏರಿಕೆ 59,974 ರೂ. 2013ರ ಜನವರಿ 23 ರಂದು ದಾಖಲಿಸಿತ್ತು. ಬುಧವಾರದ ಪೇಟೆಯಲ್ಲಿ ಆ ದಾಖಲೆಯನ್ನು ಅಳಿಸಿ ಹಾಕಿದೆ.

ಬೆಳ್ಳಿಯು ಅಂತಾರಾಷ್ಟ್ರೀಯ ಫ್ಯೂಚರ್​ ಮಾರುಕಟ್ಟೆಯ ಕಾಮೆಕ್ಸ್‌ನಲ್ಲಿ ಪ್ರತಿ ಔನ್ಸ್‌ಗೆ 23 ಡಾಲರ್​ಗೆ ಏರಿದೆ. ಕಾಮೆಕ್ಸ್ ಚಿನ್ನವೂ ಔನ್ಸ್‌ಗೆ 1866.75 ಡಾಲರ್​ ತಲುಪಿತು. ಇದು 2011ರ ಸೆಪ್ಟೆಂಬರ್ 9ರಂದು ಔನ್ಸ್‌ ಚಿನ್ನವು 1,881 ಡಾಲರ್‌ಗೆ ಹತ್ತಿರದಲ್ಲಿತ್ತು. ಕಾಮೆಕ್ಸ್‌ನಲ್ಲಿನ ಚಿನ್ನವು 2011ರ ಸೆಪ್ಟೆಂಬರ್ 6ರಂದು ಔನ್ಸ್‌ಗೆ 1911.60 ಡಾಲರ್​ಗೆ ಏರಿದ್ದು, ಇಲ್ಲಿಯವರೆಗಿನ ದಾಖಲೆ ಆಗಿದೆ.

ABOUT THE AUTHOR

...view details