ಕರ್ನಾಟಕ

karnataka

ETV Bharat / business

ಏರಿಕೆಯ ಹಾದಿಯಲ್ಲಿ ಚಿನ್ನ - ಬೆಳ್ಳಿ: ಮೇ 24ರ ಗೋಲ್ಡ್ ರೇಟ್​ ಹೀಗಿದೆ! - ಇಂದಿನ ಚಿನ್ನದ ದರ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಇಳಿದು 72.87 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಹಸಿರು ಬಣ್ಣದಲ್ಲಿದ್ದು, ಔನ್ಸ್‌ಗೆ 1,882 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.67 ಡಾಲರ್‌ಗೆ ಸಮತಟ್ಟಾಗಿದೆ.

Gold
Gold

By

Published : May 24, 2021, 5:10 PM IST

ನವದೆಹಲಿ: ಜಾಗತಿಕ ಮಟ್ಟದಲ್ಲಿ ಧನಾತ್ಮಕ ಪ್ರವೃತ್ತಿ ಮತ್ತು ರೂಪಾಯಿ ಸವಕಳಿಯ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 95 ರೂ. ಹೆಚ್ಚಳವಾಗಿ 48,015 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಇದು 10 ಗ್ರಾಂ.ಗೆ 47,920 ರೂ. ಆಗಿತ್ತು. ಇಂದು ಅಲ್ಪ 95 ರೂ. ಏರಿಕೆಯಾಗಿ. ಬೆಳ್ಳಿ ಸಹ ಪ್ರತಿ ಕೆಜಿ ಮೇಲೆ 154 ರೂ. ಹೆಚ್ಚಳವಾಗಿ 70,998 ರೂ.ಗೆ ತಲುಪಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಇಳಿದು 72.87 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಹಸಿರು ಬಣ್ಣದಲ್ಲಿದ್ದು, ಔನ್ಸ್‌ಗೆ 1,882 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.67 ಡಾಲರ್‌ಗೆ ಸಮತಟ್ಟಾಗಿದೆ.

ಸತತ ಮೂರು ವಾರಗಳವರೆಗೆ ಗಳಿಸಿದ ನಂತರ ಚಿನ್ನದ ಬೆಲೆಗಳು ಮೇಲ್ಮುಖವಾಗಿ ಮುಂದುವರೆದವು. ಚಿನ್ನದ ಬೆಲೆಗಳು ದುರ್ಬಲ ಡಾಲರ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ವಹಿವಾಟು ನಡೆಸಿದವು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ದುರ್ಬಲ ಡಾಲರ್ ಮತ್ತು ಅಮೆರಿಕದ ಯೆಲ್ಡ್​ಗಳ ನಡುವೆ ಚಿನ್ನವು ಅತ್ಯುನ್ನತ ಮಟ್ಟಕ್ಕೆ ಸ್ಥಿರವಾಗಿದೆ. ಹೂಡಿಕೆದಾರರು ಅಮೂಲ್ಯವಾದ ಲೋಹದ ಮೇಲೆ ಆಶಾವಾದ ಹೆಚ್ಚಿಸಿದ್ದಾರೆ ಎಂದು ತೋರಿಸುತ್ತದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಉಪಾಧ್ಯಕ್ಷ (ಸರಕುಗಳ ಸಂಶೋಧನೆ) ನವನೀತ್ ದಮಾನಿ ಅಭಿಪ್ರಾಯಪಟ್ಟರು.

ABOUT THE AUTHOR

...view details