ಕರ್ನಾಟಕ

karnataka

ETV Bharat / business

ಏಕಾಏಕಿ 2,246 ರೂ. ಹೆಚ್ಚಳವಾದ ಬೆಳ್ಳಿ: ಬಂಗಾರದ ದರ ಹೀಗಿದೆ ನೋಡಿ!

ಹಿಂದಿನ ವಹಿವಾಟಿನಲ್ಲಿ ಅಮೂಲ್ಯ ಲೋಹವು 10 ಗ್ರಾಂ.ಗೆ 52,545 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬೆಳ್ಳಿ ಸಹ ಭಾರೀ ಖರೀದಿ ಆಸಕ್ತಿ ಸೆಳೆದಿದ್ದು, ಪ್ರತಿ ಕೆ.ಜಿ. ಮೇಲೆ 2,246 ರೂ.ಯಷ್ಟು ಏರಿಕೆಯಾಗಿ 72,793 ರೂ.ಗೆ ತಲುಪಿದೆ. ಸೋಮವಾರದ ವಹಿವಾಟಿನಂದು 70,547 ರೂ.ಯಲ್ಲಿ ಮಾರಾಟ ಆಗುತ್ತಿತ್ತು.

Gold
ಚಿನ್ನ

By

Published : Sep 1, 2020, 5:09 PM IST

ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಱಲಿಯ ನಂತರ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂ. ಮೇಲೆ 418 ರೂ. ಏರಿಕೆಯಾಗಿ 52,963 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಅಮೂಲ್ಯ ಲೋಹವು 10 ಗ್ರಾಂ.ಗೆ 52,545 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬೆಳ್ಳಿ ಸಹ ಭಾರೀ ಖರೀದಿ ಆಸಕ್ತಿ ಸೆಳೆದಿದ್ದು, ಪ್ರತಿ ಕೆ.ಜಿ. ಮೇಲೆ 2,246 ರೂ.ಯಷ್ಟು ಏರಿಕೆಯಾಗಿ 72,793 ರೂ.ಗೆ ತಲುಪಿದೆ. ಸೋಮವಾರದ ವಹಿವಾಟಿನಂದು 70,547 ರೂ.ಯಲ್ಲಿ ಮಾರಾಟ ಆಗುತ್ತಿತ್ತು.

ದೆಹಲಿಯಲ್ಲಿ 24 ಕ್ಯಾರೆಟ್‌ ಸ್ಪಾಟ್ ಚಿನ್ನದ ಬೆಲೆಗಳು ಅಂತಾರಾಷ್ಟ್ರೀಯ ಬೆಲೆಯಲ್ಲಿ ಱಲಿಯೊಂದಿಗೆ 418 ರೂ.ಯಷ್ಟು ಹೆಚ್ಚಾಗಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿನ ಉಲ್ಬಣವು ರೂಪಾಯಿ ಮೌಲ್ಯದ ಏರಿಕೆಯೊಂದಿಗೆ ಮರೆಯಾಯಿತು ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ದುರ್ಬಲ ಅಮೆರಿಕನ್ ಕರೆನ್ಸಿ ಮತ್ತು ಸಕಾರಾತ್ಮಕ ದೇಶಿಯ ಷೇರುಗಳ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯವು 73 ಪೈಸೆ ವೃದ್ಧಿಗೊಂಡಿದೆ. ಯುಎಸ್ ಡಾಲರ್ ವಿರುದ್ಧ ಮಂಗಳವಾರ 73 ಅಂಕ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಔನ್ಸ್​ ಚಿನ್ನವು 1,988 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಬೆಳ್ಳಿ ಸಹ ಔನ್ಸ್‌ಗೆ 28.77 ಡಾಲರ್‌ಗೆ ಹೆಚ್ಚಳವಾಗಿದೆ.

ABOUT THE AUTHOR

...view details