ನವದೆಹಲಿ:ಫ್ಯೂಚರ್ಸ್ ಮಾರುಕಟ್ಟೆ ವಹಿವಾಟಿನಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂ ಮೇಲೆ 825 ರೂ. ಏರಿಕೆಯಾಗಿ 51,860 ರೂ.ಗೆ ತಲುಪಿದೆ.
ಒಂದೇ ದಿನ 3,360 ರೂ. ಜಿಗಿದ ಬೆಳ್ಳಿ: ಬಂಗಾರ ದರ ಹೀಗಿದೆ ನೋಡಿ! - ಎಂಸಿಎಕ್ಸ್
ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿ ಆಗಸ್ಟ್ ವಿತರಣೆಯ ಚಿನ್ನವು 5,048 ಲಾಟ್ಸ್ ವಹಿವಾಟಿನಲ್ಲಿ 10 ಗ್ರಾಂ ಮೇಲೆ ಶೇ.1.62ರಷ್ಟು ಹೆಚ್ಚಾಗಿದೆ. ನ್ಯೂಯಾರ್ಕ್‌ನಲ್ಲಿ ಔನ್ಸ್ ಚಿನ್ನದ ದರ ಶೇ.1.89ರಷ್ಟು ಹೆಚ್ಚಳವಾಗಿ 1,961.60 ಡಾಲರ್‌ನಲ್ಲಿ ವಹಿವಾಟು ನಡೆಸಿತು.
ಚಿನ್ನ

ಬೆಳ್ಳಿಯ ಬೆಲೆ ಸಹ ಕೆಜಿಗೆ 3,360 ರೂ. ಹೆಚ್ಚಳವಾಗಿ 64,583 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಬೆಳ್ಳಿ ಮೇಲೆ ಶೇ.6.15ರಷ್ಟು ಹೆಚ್ಚಳವಾಗಿ 24.26 ಡಾಲರ್‌ಗೆ ತಲುಪಿದೆ.