ಕರ್ನಾಟಕ

karnataka

ETV Bharat / business

ಮತ್ತೆ ಗಗನ ಮುಖಿಯಾದ ಬಂಗಾರ: 10 ಗ್ರಾಂ. ಬೆಲೆಯೆಷ್ಟು ಗೊತ್ತೆ? - ಎಂಸಿಎಕ್ಸ್​

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ಆಗಸ್ಟ್ ವಿತರಣೆಯ ಚಿನ್ನದ ಒಪ್ಪಂದ 9,698 ಲಾಟ್‌ ವ್ಯವಹಾರ ವಹಿವಾಟಿನಲ್ಲಿ 10 ಗ್ರಾಂ.ಗೆ 175 ರೂ. ಅಥವಾ ಶೇ 0.36ರಷ್ಟು ಹೆಚ್ಚಳವಾಗಿ 49,038 ರೂ.ಗೆ ತಲುಪಿದೆ.

Gold
ಚಿನ್ನ

By

Published : Jul 13, 2020, 2:57 PM IST

ನವದೆಹಲಿ: ಫ್ಯುಚರ್​ ವಹಿವಾಟಿನ ಚಿನ್ನದ ಬೆಲೆಯು ಸೋಮವಾರ ಪ್ರತಿ 10 ಗ್ರಾಂ.ಗೆ 175 ರೂ.ಯಷ್ಟು ಏರಿಕೆಯಾಗಿ 10 ಗ್ರಾಂಗೆ 49,038 ರೂ.ಗೆ ತಲುಪಿದೆ.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ಆಗಸ್ಟ್ ವಿತರಣೆಯ ಚಿನ್ನದ ಒಪ್ಪಂದ 9,698 ಲಾಟ್‌ ವ್ಯವಹಾರ ವಹಿವಾಟಿನಲ್ಲಿ 10 ಗ್ರಾಂ.ಗೆ 175 ರೂ. ಅಥವಾ ಶೇ 0.36ರಷ್ಟು ಹೆಚ್ಚಳವಾಗಿ 49,038 ರೂ.ಗೆ ತಲುಪಿದೆ.

ಹೂಡಿಕೆದಾರರು ಚಿನ್ನದತ್ತ ಗಮನಹರಿಸಿದ್ದರ ಪ್ರತಿಫಲವಾಗಿ ಬಂಗಾರದ ಧಾರಣೆಯಲ್ಲಿ ಏರಿಕೆ ಕಂಡುಬಂತು ಎಂದು ವಿಶ್ಲೇಷಕರು ಹೇಳಿದ್ದಾರೆ.

ಜಾಗತಿಕ ಪೇಟೆಯ ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್​ ಚಿನ್ನದ ಬೆಲೆ ಮೇಲೆ 0.39ರಷ್ಟು ಹೆಚ್ಚಳವಾಗಿ 1,808.90 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details