ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರದ ವಹಿವಾಟಿನಂದು 10 ಗ್ರಾಂ. ಚಿನ್ನದ ಮೇಲೆ 59 ರೂ.ಯಷ್ಟು ಇಳಿಕೆಯಾಗಿ 51,034 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯ ಲೋಹವು 10 ಗ್ರಾಂ.ಗೆ 51,093 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇಂದು 59 ರೂ.ನಷ್ಟು ಇಳಿಕೆಯಾಗಿ 51,034 ರೂ.ಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿ ಮೇಲೆ 753 ರೂ. ಕುಸಿದು 62,008 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಎರಡೂ ಬೆಲೆಗಳು ಹಿಂದಿನ ಮಟ್ಟಕ್ಕಿಂತ ಸ್ವಲ್ಪಮಟ್ಟಿಗೆ ಕುಸಿದವು. ಬಂಗಾರ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್ ಕ್ರಮವಾಗಿ 1,901.30 ಡಾಲರ್ ಮತ್ತು 24.26 ಡಾಲರ್ನಲ್ಲಿ ನಿರತವಾಗಿವೆ.
ಡಾಲರ್ ಸೂಚ್ಯಂಕದಲ್ಲಿ ಚಿನ್ನದ ಬೆಲೆಗಳು ದುರ್ಬಲವಾಗಿ ವಹಿವಾಟು ನಡೆಸಿದವು. ಇವುಗಳ ಬೆಲೆಗಳು ಸ್ಥಗಿತಗೊಂಡ ಪ್ರಚೋದನೆಯ ವೇಗದ ಮೇಲೆ ಒತ್ತಡವನ್ನುಂಟು ಮಾಡಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.