ನವದೆಹಲಿ: ಜಾಗತಿಕ ಪ್ರವೃತ್ತಿಯಲ್ಲಿ ದುರ್ಬಲವಾದ ಚಿನ್ನದ ಬೆಲೆಗಳಿಂದಾಗಿ ಸೋಮವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಮೇಲೆ 142 ರೂ. ಕುಸಿದು 47,483 ರೂ.ಗೆ ಇಳಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನ ಅಂತ್ಯದಲ್ಲಿ ಅಮೂಲ್ಯ ಲೋಹವು 10 ಗ್ರಾಂ.ಗೆ 47,625 ರೂ. ವಹಿವಾಟು ನಡೆಸಿತ್ತು. ಬೆಳ್ಳಿಯ ಬೆಲೆ ಸಹ ಕೆ.ಜಿ.ಗೆ 58,509 ರೂ.ಗಳಿಂದ 701 ರೂ. ಕ್ಷೀಣಿಸಿ 57,808 ರೂ.ಗೆ ತಲುಪಿದೆ.