ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರದ ವಹಿವಾಟಿನಂದು ಪ್ರತಿ 10 ಗ್ರಾಂ. ಚಿನ್ನದ ಬೆಲೆಯ ಮೇಲೆ 114 ರೂ.ಯಷ್ಟು ಇಳಿಕೆಯಾಗಿ 49,996 ರೂ.ಗೆ ತಲುಪಿದೆ.
ಈ ಹಿಂದಿನ ವಹಿವಾಟಿನಲ್ಲಿ ಬಂಗಾರವು 10 ಗ್ರಾಂ.ಗೆ 50,110 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬೆಳ್ಳಿ ಸಹ ಪ್ರತಿ ಕೆ.ಜಿ.ಯ ಮೇಲೆ 140 ರೂ.ಯಷ್ಟು ಕ್ಷೀಣಿಸಿ 53,427 ರೂ.ಗೆ ಬಂದಿದೆ.
ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆಗಳು 114 ರೂ.ಯಷ್ಟು ಇಳಿಕೆ ಕಂಡಿದ್ದು, ಅಂತಾರಾಷ್ಟ್ರೀಯ ಚಿನ್ನ ಮತ್ತು ರೂಪಾಯಿ ಏರಿಕೆಯೊಂದಿಗೆ ದರ ಬದಲಾವಣೆ ಆಗಿದೆ ಎಂದು ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನವು 1,798 ಡಾಲರ್‌ಗೂ ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಔನ್ಸ್ ಬೆಳ್ಳಿ 19.03 ಡಾಲರ್‌ಗೆ ಸ್ವಲ್ಪ ಹೆಚ್ಚಳ ಕಂಡಿದೆ.