ನವದೆಹಲಿ:ಜಾಗತಿಕ ಪೇಟೆಯಲ್ಲಿ ಅಮೂಲ್ಯವಾದ ಲೋಹದ ಬೆಲೆಗಳ ಕುಸಿತದ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು 10 ಗ್ರಾಂ. ಮೇಲೆ 97 ರೂ.ಯಷ್ಟು ಅಲ್ಪ ಕುಸಿತ ದಾಖಲಿಸಿ 47,853 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಚಿನ್ನವು 10 ಗ್ರಾಂ.ಗೆ 47,950 ರೂ.ಯಷ್ಟಿತ್ತು. ಬೆಳ್ಳಿ ಪ್ರತಿ ಕಿಲೋಗ್ರಾಂಗೆ 73,232 ರೂ.ಯಿಂದ 1,417 ರೂ. ಕುಸಿದು 71,815 ರೂ.ಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಔನ್ಸ್‌ಗೆ ಕ್ರಮವಾಗಿ 1,867 ಡಾಲರ್ ಮತ್ತು 27.88 ಡಾಲರ್‌ಗೆ ವಹಿವಾಟು ನಡೆಸುತ್ತಿವೆ.