ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನವು 10 ಗ್ರಾಂ. ಮೇಲೆ 92 ರೂ.ಯಷ್ಟು ತಗ್ಗಿ 48,424 ರೂ.ಯಲ್ಲಿ ವಹಿವಾಟು ನಡೆಸಿತು ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 48,516 ರೂ.ಯಲ್ಲಿ ಖರೀದಿ ಆಗುತ್ತಿತ್ತು. ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 70,595 ರೂ.ಯಷ್ಟು ಇತ್ತು. ಇಂದು 414 ರೂ.ಯಷ್ಟು ಇಳಿಕೆಯಾಗಿ 70,181 ರೂ.ಗೆ ತಲುಪಿದೆ.
ಓದಿ: 17 ರಾಜ್ಯಗಳಿಗೆ ₹ 9,871 ಕೋಟಿ ಆದಾಯ ಕೊರತೆ ಅನುದಾನ ಬಿಡುಗಡೆ: ಕರ್ನಾಟಕಕ್ಕೆ ಸಿಕ್ಕಿದೆಷ್ಟು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,893 ಡಾಲರ್‌ಗೆ ಸ್ವಲ್ಪ ಹೆಚ್ಚಾಗಿದೆ. ಬೆಳ್ಳಿ ಔನ್ಸ್‌ಗೆ 27.65 ಡಾಲರ್‌ನಲ್ಲಿ ಸಮತಟ್ಟಾಗಿದೆ. ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್, ಅಮೆರಿಕ ಹಣದುಬ್ಬರ ದತ್ತಾಂಶದಿಂದ ಹೊಸ ಉತ್ತೇಜಕಗಳಿಗೆ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಕಾಯುತ್ತಿರುವುದರಿಂದ ಚಿನ್ನದ ಬೆಲೆಗಳು ಡಾಲರ್ ಏರಿಳಿತದೊಂದಿಗೆ ಕಿರಿದಾದ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿವೆ ಎಂದು ಹೇಳಿದರು.