ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಳಿಕೆಯ ನಡೆಯನ್ನು ಅನುಸರಿಸಿದ ದೇಶಿ ಹಳದಿ ಲೋಹದ ಮಾರುಕಟ್ಟೆಯ ಬೆಲೆಗಳು ಇಳಿಕೆ ದಾಖಲಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 614 ರೂ. ಇಳಿಕೆಯಾಗಿ 52,314 ರೂ.ಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯ ಆನಿಶ್ಚಿತತೆಯಿಂದ ದರ ಕುಸಿತವಾಗಿದೆ. ಹಿಂದಿನ ವಹಿವಾಟಿನಲ್ಲಿ ಇದೇ ಚಿನ್ನ 52,928 ರೂ.ಯಲ್ಲಿ ಮಾರಾಟ ಆಗಿತ್ತು ಎಂದು ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ತಿಳಿಸಿದೆ.
ಚಿನ್ನದ ಹಾದಿ ತುಳಿದ ಬೆಳ್ಳಿಯು ಕೂಡ ಪ್ರತಿ ಕೆ.ಜಿ. ಮೇಲೆ 1,799 ರೂ.ಯಷ್ಟು ಕುಸಿತವಾಗಿ 71,202 ರೂ.ಗೆ ತಲುಪಿದೆ. ಮಂಗಳವಾರದ ವಹಿವಾಟಿನಂದು ಇದು 73,001 ರೂ.ಯಲ್ಲಿ ಮಾರಾಟ ಆಗಿತ್ತು.