ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆ ನಡೆ ಅನುಸರಿಸಿದ ಚಿನ್ನದ ಬೆಲೆ ಗುರುವಾರ ರಾಜಧಾನಿಯಲ್ಲಿ 10 ಗ್ರಾಂ.ಗೆ 358 ರೂ. ಇಳಿದು 45,959 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಅಮೂಲ್ಯವಾದ ಲೋಹವು ಬುಧವಾರದ ವಹಿವಾಟಿನಂದು 10 ಗ್ರಾಂ. ಮೇಲೆ 46,313 ರೂ.ಯಲ್ಲಿ ಗರಿಷ್ಠ ಮಾರಾಟ ಆಗುತ್ತಿತ್ತು. ಮತ್ತೊಂದೆಡೆ ಬೆಳ್ಳಿ ಪ್ರತಿ ಕೆ.ಜಿ. ಮೇಲೆ 151 ರೂ. ಹೆಚ್ಚಳವಾಗಿ 69,159 ರೂ.ಗೆ ತಲುಪಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಸ್ಪಾಟ್ ಬೆಲೆಗಳು ಜಾಗತಿಕ ಚಿನ್ನದ ಮಾರಾಟಕ್ಕೆ ಅನುಗುಣವಾಗಿ 358 ರೂ.ಯಷ್ಟು ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದರು.
ಇದನ್ನೂ ಓದಿ: ಜಾಗತಿಕ ಔಷಧ ಉದ್ಯಮವು ಭಾರತದ ಡಬ್ಲ್ಯುಟಿಒ ಪ್ರಸ್ತಾಪ ಬೆಂಬಲಿಸುತ್ತೆ: ಗೋಯಲ್ ವಿಶ್ವಾಸ
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನವು ಔನ್ಸ್‌ಗೆ 1,792 ಡಾಲರ್‌ಗೆ ಇಳಿದಿದ್ದರೆ, ಬೆಳ್ಳಿ ಔನ್ಸ್‌ಗೆ 27.56 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.