ಕರ್ನಾಟಕ

karnataka

ETV Bharat / business

2,328 ರೂ. ಜಿಗಿದ ಸಿಲ್ವರ್​ ದರ : ಕೆಳಮುಖವಾದ ಬಂಗಾರದ ಬೆಲೆ - ಇಂದಿನ ಚಿನ್ನದ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,776 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 26.42 ಡಾಲರ್‌ಗೆ ಸಮತಟ್ಟಾಗಿದೆ..

Gold
Gold

By

Published : May 5, 2021, 4:42 PM IST

ನವದೆಹಲಿ : ವಿದೇಶಗಳಲ್ಲಿ ಹಳದಿ ಲೋಹದ ಬೆಲೆ ಕುಸಿತಕ್ಕೆ ಅನುಗುಣವಾಗಿ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಪ್ರತಿ 10 ಗ್ರಾಂ.ಗೆ 317 ರೂ.ಯಷ್ಟು ಇಳಿಕೆಯಾಗಿ 46,382 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 46,699 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಬೆಳ್ಳಿ ಪ್ರತಿ ಕಿಲೋಗ್ರಾಂಗೆ 2,328 ರೂ. ಹೆಚ್ಚಳವಾಗಿ 70,270 ರೂ.ಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,776 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 26.42 ಡಾಲರ್‌ಗೆ ಸಮತಟ್ಟಾಗಿದೆ. ಚಿನ್ನದ ಬೆಲೆಗಳು ಬಲವಾದ ಡಾಲರ್ ಮತ್ತು ಅಮೆರಿಕದ ಬಾಂಡ್ ಇಳುವರಿಗಳ ಮೇಲಿನ ಒತ್ತಡದಲ್ಲಿ ವಹಿವಾಟು ನಡೆಸುತ್ತವೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ABOUT THE AUTHOR

...view details