ನವದೆಹಲಿ: ಅಂತಾರಾಷ್ಟ್ರೀಯ ಪ್ರವೃತ್ತಿ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಗಳು ಸೋಮವಾರ ಅಲ್ಪ ಇಳಿಕೆ ದಾಖಲಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 44 ರೂ. ಇಳಿಕೆಯಾಗಿ 53,040 ರೂ. ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 53,084 ರೂ.ಯಲ್ಲಿ ವಹಿವಾಟು ನಡೆಸಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಸ್ಪಾಟ್ ಚಿನ್ನದ ಬೆಲೆಗಳು ರೂಪಾಯಿ ಏರಿಳಿತದೊಂದಿಗೆ ಚಂಚಲ ವಹಿವಾಟು ನಡೆಸಿತು. ಬೆಲೆಗಳು ಆರಂಭಿಕ ಲಾಭಗಳನ್ನು ತೀಕ್ಷ್ಣವಾದ ರೂಪಾಯಿ ಚೇತರಿಕೆ ಕಂಡಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.