ಕರ್ನಾಟಕ

karnataka

ETV Bharat / business

ಏರ್ತಾನೇ ಹೋಗ್ತಿದೆ ಚಿನ್ನದ ದರ! 50 ಸಾವಿರ ರೂ. ಸನಿಹದಲ್ಲಿ ಬೆಳ್ಳಿ: ಬಯಲಾದ ಬೆಲೆ ಏರಿಕೆ ರಹಸ್ಯ - All India Sarafa Association

ಬಂಗಾರವು ತನ್ನ ದಾಖಲೆಯ ಬೆಲೆ ಏರಿಕೆಯ ಓಟವನ್ನು ಮುಂದುವರಿಸಿದೆ. ಗುರುವಾರದ ಚಿನಿವಾರ ಪೇಟೆಯಲ್ಲಿ 10 ಗ್ರಾಂ. ಬಂಗಾರದಲ್ಲಿ 250 ರೂ. ಏರಿಕೆಯಾಗಿ ಇದೇ ಪ್ರಥಮ ಬಾರಿಗೆ ₹ 40,220 ತಲುಪಿದೆ. ಬುಧವಾರದ ಪೇಟೆಯಲ್ಲಿ 300 ಏರಿಕೆಗೊಂಡ ಚಿನ್ನ ಇಂದು 40 ಸಾವಿರ ಗಡಿದಾಟಿದೆ.

ಸಾಂದರ್ಭಿಕ ಚಿತ್ರ

By

Published : Aug 29, 2019, 10:55 PM IST

ನವದೆಹಲಿ: ಚಿನ್ನದ ಮೇಲೆ ಹೂಡಿಕೆದಾರರ ಬೇಡಿಕೆ ಹಾಗೂ ಜಾಗತಿಕ ಆರ್ಥಿಕತೆಯ ಕುಸಿತದ ಭೀತಿಯಿಂದಾಗಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 250 ಏರಿಕೆಯಾಗಿ 40,220ರಲ್ಲಿ ವಹಿವಾಟು ನಡೆಸುತ್ತಿದೆ.

ಗುರುವಾರದ ಚಿನಿವಾರ ಪೇಟೆಯಲ್ಲಿ 10 ಗ್ರಾಂ. ಬಂಗಾರದಲ್ಲಿ 250 ರೂ. ಏರಿಕೆಯಾಗಿ ಇದೇ ಪ್ರಥಮ ಬಾರಿಗೆ ₹ 40,220 ತಲುಪಿದೆ. ಬುಧವಾರದ ಪೇಟೆಯಲ್ಲಿ 300 ಏರಿಕೆಗೊಂಡ ಚಿನ್ನ ಇಂದು 40 ಸಾವಿರ ಗಡಿದಾಟಿತು.

ಕೈಗಾರಿಕಾ ಘಟಕಗಳ ಮತ್ತು ನಾಣ್ಯ ತಯಾರಕರ ಬೇಡಿಕೆ ಹೆಚ್ಚಾಗಿದ್ದರಿಂದ ಪ್ರತಿ ಕೆ.ಜಿ. ಬೆಳ್ಳಿ ಧಾರಣೆಯಲ್ಲಿ 200 ರೂ. ಏರಿಕೆಯಾಗಿದೆ 49,050 ರೂ.ದಲ್ಲಿ ಮಾರಾಟ ಆಗುತ್ತಿದೆ. ಬಲವಾದ ಸಾಗರೋತ್ತರ ಪ್ರವೃತ್ತಿಯ ಜಾಗತಿಕ ಆರ್ಥಿಕತೆಯ ಆತಂಕ ಮತ್ತು ಯುಎಸ್- ಚೀನಾ ನಡುವಿನ ವ್ಯಾಪಾರ ಸಮರ ಅನಿಶ್ಚಿತವಾಗಿ ಹಳದಿ ಲೋಹದ ಬೇಡಿಕೆ ಹೆಚ್ಚಾಗುತ್ತಿದೆ.

ಅಮೆರಿಕ ಮತ್ತು ಜರ್ಮನ್ ತಮ್ಮ ಬಾಂಡ್ ದರ ಇಳಿಸಿದ್ದರಿಂದ ಆರ್ಥಿಕ ಮಂದಗತಿಯ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕ- ಚೀನಾ ವ್ಯಾಪಾರ ಮಾತುಕತೆ ಹಾಗೂ ಯುಎಸ್ ಫೆಡರಲ್ ರಿಸರ್ವ್​ ನಿಲುವು (ದರ ಕಡಿತದ ಮೇಲೆ) ಬೆಲೆ ಪ್ರವೃತ್ತಿಯನ್ನು ನಿರ್ಧರಿಸಲಿವೆ. ಯುರೋಪ್​ ಒಕ್ಕೂಟದ ರಾಜಕೀಯ ಬ್ರೆಕ್ಸಿಟ್​ ಅಂಗೀಕಾರ ಹಾಗೂ ಆರ್ಥಿಕ ಮುಗ್ಗಟ್ಟಿನ ಭಯ ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ವಿಶ್ಲೇಷಿಸಿದ್ದಾರೆ.

ABOUT THE AUTHOR

...view details